ಮಂಗಳೂರು: ಮಾರ್ಸೆಲ್ ಎಂ. ಡಿಸೋಜರ ‘ಚುಟುಕಾಂ’ ಕೃತಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.21. ಜೆನೆಸಿಸ್ ಪ್ರಕಾಶನದ ವ್ಯವಸ್ಥಾಪಕ ಮಾರ್ಸೆಲ್ ಎಂ. ಡಿಸೋಜರ ‘ಚುಟುಕಾಂ’ ಕೃತಿಯನ್ನು ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕೊಂಕಣಿ ಭಾಷೆಯಲ್ಲಿ ಬರೆಯುವರ ಸಂಖ್ಯೆ ಕಡಿಮೆ. ಇಂತಹ ಸಮಯದಲ್ಲಿ ಮಾರ್ಸೆಲ್- ತಮ್ಮ ಕೃತಿಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ ಎಂದರು. ಈ ಕೃತಿಯಲ್ಲಿ 400 ಚುಟುಕುಗಳಿವೆ. ಪ್ರೀತಿ, ವಿರಸ, ಚಿಂತೆ, ಭಯ, ಭವಿಷ್ಯದ ಹೇಳಿಕೆ, ಧರ್ಮ, ರಾಜಕೀಯ, ಸಮುದಾಯದ ಬಗ್ಗೆ ಚಿಂತನೆ ಹಾಗೂ ಪ್ರತಿಭಟನೆಯ ಚುಟುಕುಗಳು ಈ ಕೃತಿಯಲ್ಲಿವೆ ಎಂದು ಮಾರ್ಸೆಲ್ ಡಿಸೋಜ ತಿಳಿಸಿದರು.

Also Read  ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ - ಪೋಕ್ಸೋ ಪ್ರಕರಣ ದಾಖಲು

 

error: Content is protected !!
Scroll to Top