(ನ್ಯೂಸ್ ಕಡಬ) newskadaba.com ಇಂಫಾಲ್. ಸೆ. 21: ಮಣಿಪುರದಲ್ಲಿ 900 ಕುಕಿ ಉಗ್ರರು ಮಯನ್ಮಾರ್ ನಿಂದ ಒಳನುಸುಳಿರುವುದು ಬೆಳಕಿಗೆ ಬಂದಿದೆ ಎಂದು ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಸೆ.20 ರಂದು ಪತ್ರಿಕಾಗೋಷ್ಠಿ ನಡೆಸಿದ ಕುಲದೇಪ ಸಿಂಗ್ ರವರು ಕಳೆದ ಮೂರ್ನಾಲ್ಕು ದಿನಗಳಿಂದ ಉಗ್ರಗಾಮಿಗಳ ಚಲನವಲನದ ಬಗ್ಗೆ ವರದಿಯಾಗುತ್ತಿದ್ದು, ಒಳನುಸುಳುವ ಉಗ್ರಗಾಮಿಗಳು ಡ್ರೋನ್ ಗಳು, ಬಾಂಬುಗಳು, ಸ್ಪೋಟಕಗಳು ಕ್ಷಿಪಣಿ ಮತ್ತು ಗೆರಿಲ್ಲಾ ಯುದ್ಧ ಸಾಧನಗಳನ್ನು ಬಳಸುತ್ತಿದ್ದಾರೆ. 30 ಜನರ ತಂಡ ವಿವಿಧ ಪರದೇಶಗಳಲ್ಲಿ ಅಡಗಿಕೊಂಡಿದೆಯೆಂದು ಮಾಹಿತಿ ನೀಡಿದ್ದಾರೆ.