(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಭವಿಷ್ಯದ ಇಂಧನ ಎಂದೇ ಹೆಸರಾಗಿರುವ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಮಂಗಳೂರಿನಲ್ಲಿ ಘಟಕ ಸ್ಥಾಪನೆ ಅಂತಿಮಗೊಂಡಿದೆ. ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಆಗಿ ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಎಂಆರ್‌ಪಿಎಲ್ ತನ್ನ ಪರಿಸರದಲ್ಲೇ 2026ರ ವೇಳೆಗೆ ವಾರ್ಷಿಕ 500 ಟನ್ ಲಿಕ್ವಿಡ್ ಹೈಡ್ರೋಜನ್ ಉತ್ಪಾದಿಸುವ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಗ್ರೀನ್ ಹೈಡ್ರೋಜನ್ ನೀತಿಯನ್ವಯ ನವೀಕರಿಸಬಹುದಾದ ಇಂಧನದಿಂದ ನೀರಿನ ಎಲೆಕ್ಟ್ರಾಲಿಸಿಸ್ ನಡೆಸಿ ಪಡೆಯುವ ಹೆಡ್ರೋಜನ್ ಅನ್ನು ಹಸುರು ಹೆಡ್ರೋಜನ್ ಎಂದು ವ್ಯಾಖ್ಯಾನಿಸಲಾಗಿದೆ. ಇದೇ ನೀತಿಯ ಅನ್ವಯ ರಿಫೈನರಿಗಳಿಗೆ ಈ ಹಸುರು ಹೈಡ್ರೋಜನ್ ಅನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನೀಡಲಾಗಿದೆ.