(ನ್ಯೂಸ್ ಕಡಬ) newskadaba.com,ಚೆನ್ನೈ ಸೆ. 21: ಬಾಂಗ್ಲಾದೇಶ (IND vs BAN) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತದ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ ರಿಷಭ್ ಪಂತ್ 3 ಸಿಕ್ಸರ್ ಬಾರಿಸುವ ಮೂಲಕ ಮಾಜಿ ದಿಗ್ಗಜ ಆಟಗಾರ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಕಾರು ಅಪಘಾತದಿಂದ ಗಾಯಗೊಂಡು 20 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿರುವ ರಿಷಭ್ ಪಂತ್ ತಮ್ಮ ಹಳೇಯ ಶೈಲಿಯಲ್ಲೇ ಬ್ಯಾಟಿಂಗ್ ನಡೆಸಿ ಗ್ರೇಟ್ ಕಮ್ಬ್ಯಾಕ್ ಮಾಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 39 ರನ್ ಬಾರಿಸಿದ್ದ ಪಂತ್ ದ್ವಿತೀಯ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಪಂತ್ ಮೂರು ಸಿಕ್ಸರ್ ಬಾರಿಸುತ್ತಿದ್ದಂತೆ ಭಾರತ ಪರ ಟೆಸ್ಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರು.
Also Read ಮನೆಯಲ್ಲಿ ಸಣ್ಣ ಸಣ್ಣ ಕಿರಿಕಿರಿ ಗಂಡ ಹೆಂಡತಿ ಜಗಳ ಮನಸ್ತಾಪ ಉಂಟಾಗಲು ಕಾರಣಗಳು | ಸೂಕ್ತ ನಿವಾರಣೆ ಇಲ್ಲಿದೆ