(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಸೆ. 21. ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶದಲ್ಲಿ ನೂತನ ಮದ್ಯ ನೀತಿ ಜಾರಿಗೆ ಬರಲಿದ್ದು, ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.
ಹೊಸ ಮದ್ಯದ ನೀತಿ ಜಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ಹೊಸ ಮದ್ಯ ನೀತಿ ಜಾರಿಗೆ ಬರಲಿದೆ. ಈ ಹೊಸ ಮದ್ಯ ನೀತಿಯಲ್ಲಿ ಎಲ್ಲಾ ಬ್ರಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂ. ಗರಿಷ್ಠ ದರ ನಿಗದಿಪಡಿಸಲಾಗಿದೆ. ಸದ್ಯ ಆಂಧ್ರಪ್ರದೇಶದಲ್ಲಿರುವ 3736 ಚಿಲ್ಲರೆ ಮದ್ಯ ಮಾರಾಟ ಅಂಗಡಿಗಳಲ್ಲಿ ಶೇಕಡಾ 10ರಷ್ಟು ಕಳ್ಳು ತೆಗೆಯುವ ಸಮುದಾಯದವರಿಗೆ ನೀಡಲಾಗುವುದು. ಆನ್ ಲೈನ್ ಲಾಟರಿ ವ್ಯವಸ್ಥೆ ಮೂಲಕ ಇವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.