ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ರಸ್ತೆ ದುರಸ್ಥಿಗೆ ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಸೆ. 21. ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಸಂಪೂರ್ಣ ಹದಗೆಟ್ಟ ರಸ್ತೆಯನ್ನು ತಕ್ಷಣ ದುರಸ್ಥಿಗೊಳಿಸುವಂತೆ ಎಸ್ಡಿಪಿಐ, ಉಳ್ಳಾಲ ನಗರಸಮಿತಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಆಗ್ರಹಿಸಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಹದಗೆಟ್ಟ ಪರಿಣಾಮ ನಿರಂತರ ರಸ್ತೆ ಅಪಘಾತವಾಗಿ ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.  ಅಲ್ಲದೇ ಪ್ರಸಕ್ತ ಸಮಸ್ಯೆಯಿಂದಾಗಿ ನಿತ್ಯ ರಸ್ತೆತಡೆಯಾಗಿ ಆಂಬುಲೆನ್ಸ್ ಸೇರಿದಂತೆ ವಾಹನಗಳು ಬ್ಲಾಕ್ ಆಗುತ್ತಿದ್ದು, ರೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರನ್ನೊಳಗೊಂಡಂತೆ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಶುಕ್ರವಾರದಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರನ್ನು ಭೇಟಿಯಾದ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ನಿಯೋಗ ಈ ರಸ್ತೆಯನ್ನು ತಕ್ಷಣ ದುರಸ್ಥಿಗೊಳಿಸುವಂತೆ ಆಗ್ರಹಿಸಿದೆ. ಪ್ರಸಕ್ತ ರಸ್ತೆಯನ್ನು ದುರಸ್ಥಿಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಹತ್ತು ದಿನಗಳ ಕಾಲಾವಕಾಶವನ್ನು ನೀಡಿದ್ದು,  ಇದಕ್ಕೆ ತಪ್ಪಿದರೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಉಳ್ಳಾಲ್ ಎಚ್ಚರಿಸಿದ್ದಾರೆ.

Also Read  ಕೊಯಿಲ ಫಾರ್ಮ್ ನಲ್ಲಿ ಬೆಂಕಿ ಅನಾಹುತ

ಎಸ್ಡಿಪಿಐ ನಿಯೋಗದಲ್ಲಿ ಉಳ್ಳಾಲ ನಗರಸಮಿತಿ ಅಧ್ಯಕ್ಷ ಅಬೂಬಕ್ಕರ್ ಉಳ್ಳಾಲ್, ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ್, ಕ್ಷೇತ್ರ ಸಮಿತಿ ಸದಸ್ಯರಾದ ಅಬ್ಬಾಸ್ ಎ.ಆರ್, ಅಬ್ದುಲ್ ಲತೀಫ್ ಕಲ್ಲಾಪು, ನಗರಸಭೆ ಕೌನ್ಸಿಲರ್ ಆದ ಅಸ್ಗರ್ ಅಲಿ, ಉಳ್ಳಾಲ ನಗರ ಸಮಿತಿಯ ತನ್ವಿರ್ ಉಳ್ಳಾಲ ಉಪಸ್ಥಿತರಿದ್ದರು.

error: Content is protected !!
Scroll to Top