ಇಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ- ಮತದಾನ ಆರಂಭ

(ನ್ಯೂಸ್ ಕಡಬ) newskadaba.com ಕೊಲಂಬೊ, ಸೆ. 21.   ಶ್ರೀಲಂಕಾದ ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಯಲ್ಲಿಇಂದು ಮತದಾನ ಪ್ರಾರಂಭವಾಗಿದೆ. 2022 ರಲ್ಲಿ ಆದಂತಹ ಆರ್ಥಿಕ ಕುಸಿತದ ನಂತರ   ಮೊದಲ ಪ್ರಮುಖ ಚುನಾವಣೆಯಾಗಿದೆ.  13,400 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 1.70 ಲಕ್ಷ ಜನರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕಿಯೆ ಆರಂಭವಾಗಿದ್ದು, ಸಂಜೆ 5ರವರೆಗೆ ನಡೆಯಲಿದೆ. ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.

ರಾನಿಲ್ ವಿಕ್ರಮ್ಸಿಂಘೆ ಹಾಲಿ ಅಧ್ಯಕ್ಷ ಅವರು ಚುನಾವಣಾ ಕಣದಲ್ಲಿದ್ದಾರೆ. ಎದುರಾಳಿಗಳಾಗಿ ನ್ಯಾಷನಲ್ ಪೀಪಲ್ಸ್ ಪವರ್  ಪಕ್ಷದ ಅಧ್ಯಕ್ಷ ಅನುರಕುಮಾರ ದಿಸನಾಯಕೆ ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕ, ಸಮಾಗಿ ಜನ ಬಲವೆಗಯ ಪಕ್ಷದ ಸಜಿತ್ ಪ್ರೇಮದಾಸ ಅವರು ಸ್ಪರ್ಧಿ ಸಿದ್ದಾರೆ

Also Read  ಜೀವನದ ಸಮಸ್ಯೆ ಹೆಚ್ಚಾಗಿದೆಯೇ? ನಿಮ್ಮ ರಾಶಿಗನುಗುಣವಾಗಿ ಈ ವಿಶೇಷ ಪರಿಹಾರ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top