ಶಿಕ್ಷಕಿ ಆತ್ಮಹತ್ಯೆ- ಪತಿಗೆ 9 ವರ್ಷ ಹಾಗೂ ಅತ್ತೆಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 20. ದೈಹಿಕ ಶಿಕ್ಷಣ ಶಿಕ್ಷಕಿ ಬೇಡಗಂ ಚೇರಿಪ್ಪಾಡಿ ನಿವಾಸಿ ಪ್ರೀತಿ ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಾದ ಆಕೆಯ ಪತಿ ಹಾಗೂ ಅತ್ತೆಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.


ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿಯ ಪತಿ ವೆಸ್ಟ್ ಎಳೆರಿ ಮಾಂಗೋಡ್ ಪೂವಂಕರ ನಿವಾಸಿ ರಾಜೇಶ್ ಕೃಷ್ಣ (39) ಎಂಬಾತನಿಗೆ ಎರಡು ಲಕ್ಷ ರೂಪಾಯಿ ದಂಡದ ಸಹಿತ 9 ವರ್ಷ ಕಠಿಣ ಸಜೆ ಹಾಗೂ ಆತನ ತಾಯಿ ಶ್ರೀಲತಾ (59) ಎಂಬವರಿಗೆ 7 ವರ್ಷ ಕಠಿಣ ಸಜೆ, 2 ಲಕ್ಷ ರೂ. ದಂಡವನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ವಿಧಿಸಿದೆ.

Also Read  ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ...ಡೇಟಾ ಉಳಿಸಿ

2017 ಆ. 18ರಂದು ಚೇರಿಪ್ಪಾಡಿಯ ಮನೆಯಲ್ಲಿ ಪ್ರೀತಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಅತ್ತೆ ನಡೆಸುತ್ತಿದ್ದ ದೌರ್ಜನ್ಯದಿಂದ ಬೇಸರಗೊಂಡು ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತನಿಖೆ ನಡೆಸಿದ್ದ ಬೇಡಗಂ ಪೊಲೀಸರು ವರದಿ ಸಲ್ಲಿಸಿದ್ದರು.

error: Content is protected !!
Scroll to Top