(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ದಸರಾ ಬಂತೆಂದರೆ ಪ್ರತಿ ವರ್ಷವೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಈಗಾಗಲೇ ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅದರಂತೆಯೇ ಈ ವರ್ಷವೂ ದಸರಾ ರಜೆ ಯಾವಾಗ ಮತ್ತು ಎಷ್ಟು ರಜೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಎಂದಿನಂತೆ ಈ ವರ್ಷ ರಾಜ್ಯದಲ್ಲಿ ಶಾಲೆಗಳಿಗೆ 10 ದಿನಗಳ ಕಾಲ ರಜೆ ನೀಡುವ ಸಾಧ್ಯತೆ ಇದೆ. ಅಂದರೆ ಅಕ್ಟೋಬರ್ 4ರಿಂದ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್ 13ಕ್ಕೆ ರಜಾದಿನಗಳು ಕೊನೆಗೊಳ್ಳುವ ಸಾಧ್ಯತೆ ಇದ್ದು, ಅಕ್ಟೋಬರ್ 14ರಿಂದ ಮತ್ತೆ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಅದರೊಂದಿಗೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ರಜೆ ಬರುತ್ತದೆ. ಅಕ್ಟೋಬರ್ 3ರಂದು ಕೂಡ ಸರ್ಕಾರ ರಜೆ ನೀಡಿದಲ್ಲಿ ಒಟ್ಟು 12 ದಿನ ರಜೆ ಇರಲಿದೆ. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳ ರಜೆಯ ಕಾರಣ 17 ದಿನ ಮಾತ್ರ ತರಗತಿಗಳು ನಡೆಯಲಿವೆ. ಆದರೆ, ದಸರಾ ರಜೆಗಳ ಕುರಿತು ರಾಜ್ಯ ಸರ್ಕಾರ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.