ಅಮಿತ್ ಶಾ: ದೇಶದಿಂದ ನಕ್ಸಲಿಸಂ ಗೆ 2026 ರ ಮಾರ್ಚ್ 31ರ ವೇಳೆಗೆ ಅಂತಿಮ ವಿದಾಯ

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 20: ದೇಶದಿಂದ ನಕ್ಸಲಿಸಂಗೆ ಅಂತಿಮ ವಿದಾಯ ದೊರೆಯಲಿದ್ದು, ನಕ್ಸಲಿಸಂ ಮೂಲೋತ್ಪಾಟನೆಗೆ 2026ರ ಮಾರ್ಚ್ 31 ರಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ನಕ್ಸಲಿಸಂಗೆ ಅಂತಿಮ ವಿದಾಯ ದೊರೆಯಲಿದೆ. ಅದಕ್ಕೂ ಮೊದಲೇ ನಕ್ಸಲಿಸಂ ಕೊನೆಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಚತ್ತೀಸ್ ಗಢದ ನಕ್ಸಲ್ ಬಾಧಿತರೊಂದಿಗೆ ಅಮಿತ್ ಶಾ ಅವರು ದೆಹಲಿಯಲ್ಲಿ ಇಂದು ಸಂವಾದ ನಡೆಸಿದ್ದು, ಈ ಸಂದರ್ಭದಲ್ಲಿ  ನಕ್ಸಲ್ ಹಾವಳಿಯಿಂದ ನೊಂದವರು ತಮ್ಮ ವೇದನೆಯನ್ನು ಸಚಿವರೊಂದಿಗೆ ತೋಡಿಕೊಂಡರು. ಈ ವೇಳೆ ದೇಶದಿಂದ ನಕ್ಸಲ್ ವಾದ ಮತ್ತು ನಕ್ಸಲೀಯ ಕಲ್ಪನೆಯನ್ನು ಕಿತ್ತೊಗೆದು ಶಾಂತಿ ಸ್ಥಾಪಿಸಲಾಗುವುದು. ಬಸ್ತಾರ್‌ನ 4 ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ದೇಶದಲ್ಲಿ ನಕ್ಸಲ್ ವಾದವನ್ನು ಕೊನೆಗೊಳಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ಅಮಿತ್ ಶಾ ತಿಳಿಸಿದರು.

Also Read  ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಗೊಂದಲ ➤ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಹೊಯಿ-ಕೈ

error: Content is protected !!
Scroll to Top