ಸರ್ಕಾರಿ ಕೆಲಸ ನೀಡುವುದಾಗಿ ಆಮಿಷ- ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಯುವಕನಿಗೆ ಬೆಸ್ಕಾಂನಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಕುರಿತು ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಲಿಖಿತ್ ಎಂಬಾತ ಪ್ರವೀಣ್, ವಿಘ್ನೇಶ್ ಹೆಗ್ಡೆ, ವೆಂಕಟೇಶ್, ಶಿವಾನಂದ್, ಶ್ರೀನಿವಾಸ್ ಮತ್ತು ರಾಜಾ ವಿರುದ್ಧ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ, ಲಿಖಿತ್ ಎಂಬಾತ ವಿಘ್ನೇಶ್ ಹೆಗ್ಡೆ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದನು. ಬೆಸ್ಕಾಂ ಹಾಗೂ ಇತರ ವಿವಿಧ ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದವಿಘ್ನೇಶ್, ತನ್ನ ಸ್ನೇಹಿತರು ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ, ತನ್ನ ಸ್ನೇಹಿತರನ್ನು ಭೇಟಿ ಮಾಡಿಸಿ ಅವರಿಗೆ 23 ಲಕ್ಷ ಹಣ ನೀಡುವಂತೆ ಲಿಖಿತ್ ಗೆ ತಿಳಿಸಿ ಆರೋಪಿಯು ನಕಲಿ ಉದ್ಯೋಗ ಪತ್ರವನ್ನು ನೀಡಿದ್ದನು. ಬಳಿಕ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ ಲಿಖಿತ್ ಗೆ ಆರೋಪಿಗಳು ಬೆದರಿಕೆ ಹಾಕಿದ್ದರು. ನಂತರ ಲಿಖಿತ್ ಪೊಲೀಸರಿಗೆ ದೂರು ನೀಡಲು ಹೋದಾಗ ಪುನಃ ಬೆದರಿಸಿ ದೂರು ನೀಡದಂತೆ ತಡೆದಿದ್ದರು. ಇತ್ತೀಚೆಗೆ ಹಣ ಕೇಳಿದಾಗ ಮತ್ತೆ ಬೆದರಿಕೆ ಹಾಕಿದ್ದರಿಂದ ಮರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top