ಮಂಗಳೂರಿನಲ್ಲೂ ಆರಂಭವಾಯಿತು ‘ಇಂದಿರಾ ಕ್ಯಾಂಟೀನ್’ ► ನಗರದ ಐದು ಕಡೆಗಳಲ್ಲಿ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.06. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಕೊನೆಗೂ ಮಂಗಳೂರಿನಲ್ಲೂ ಆರಂಭವಾಗಿದ್ದು, ಮಂಗಳವಾರದಂದು ಆಹಾರ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.

ದಿನಂಪ್ರತಿ 500 ಮಂದಿಗೆ ಊಟ, ತಿಂಡಿ ವಿತರಣೆ ನಡೆಯಲಿದ್ದು, ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ತಿಂಡಿ-ಊಟ ಬೇಕಾದವರು ಕೂಪನ್ ಪಡೆಯಬೇಕು. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ಉಪಹಾರದಲ್ಲಿ ಸೇರಿವೆ. ಉಪಹಾರಕ್ಕೆ 5 ರೂ, ಊಟಕ್ಕೆ ತಲಾ 10 ರೂ. ನಿಗದಿಗೊಳಿಸಲಾಗಿದೆ. ನೆಹರೂ ಮೈದಾನ, ಉರ್ವ, ಕಾವೂರು, ಪಂಪ್ ವೆಲ್ ಮತ್ತು ಸುರತ್ಕಲ್ ಸೇರಿ ಮಂಗಳೂರಿನ 5 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿವೆ. ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್, ಸಚಿವ ರಮನಾಥ ರೈ, ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಸಚೇತಕ ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Also Read  ಆ. 15ರ ಒಳಗೆ ಎನ್ಐಟಿಕೆ ಟೋಲ್ ಗೇಟ್ ರದ್ದುಗೊಳಿಸಲು ಆಗ್ರಹ

error: Content is protected !!
Scroll to Top