(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 20. 83603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ84049.94 ಅಂಕಗಳಿಗೆ ಏರಿಕೆಗೊಂಡು ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ಇತಿಹಾಸ ಬರೆದಿದೆ.
ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧಾರದ ನಂತರ ಜಾಗತಿಕ ಮಾರುಕಟ್ಟೆಯು ಏರುಗತಿಯಲ್ಲಿಯೇ ಸಾಗುತ್ತಿದ್ದು, ವಾರದ ಕೊನೆಯ ವಹಿವಾಟಿನ ದಿನವಾದ ಇಂದು (ಶುಕ್ರವಾರ) ನಿಫ್ಟಿ, ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಭಾರತೀಯ ಷೇರುಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ದೇಶೀಯ ಹೂಡಿಕೆದಾರರ ಬೆಂಬಲ ಮುಂದುವರಿದಿದೆ.