ಮದ್ಯಪಾನ ಸೇವಿಸಿ ಬಸ್ ಚಲಾಯಿಸಿದ ಚಾಲಕನ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 20.  ಮದ್ಯಪಾನ ಮಾಡಿ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಚಾಲಕನ ವಿರುದ್ದ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುದರ್ಶನ ದೊಡ್ಡಮನಿ ಅವರು ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಖಾಸಗಿ ಬಸ್ಸೊಂದರ ಚಾಲಕ ಪ್ರಿನ್ಸ್ ಬೆನ್ನಿ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ದುಡುಕುತನದಿಂದ ಬಸ್ಸು ಚಲಾಯಿಸಿದ್ದು ಆತನನ್ನು ತಪಾಸಣೆ ಮಾಡಿದಾಗ ಮದ್ಯ ಸೇವಿಸಿರುವುದಾಗಿ ವರದಿಯಾಗಿದೆ.

Also Read  ಧರ್ಮಸ್ಥಳ ಯೋಜನೆ ವತಿಯಿಂದ ವೀಲ್ಹ್ ಚಯರ್ ವಿತರಣೆ

error: Content is protected !!
Scroll to Top