ನಕಲಿ ಆಧಾರ್ ಕಾರ್ಡ್‌ ಬಳಕೆಗೆ ಕಡಿವಾಣ-  ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಧಾರ್ ದೃಢೀಕರಣ ಪರಿಶೀಲನೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 19. ನಕಲಿ ಆಧಾರ್ ಕಾರ್ಡ್‌ಗಳ ಬಳಕೆಗೆ ಕಡಿವಾಣ ಹಾಕಲು ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಯಾವುದೇ ಆಸ್ತಿ ನೋಂದಣಿಗೂ ಮುನ್ನಾ ಕಾರ್ಡ್ ದೃಢೀಕರಣ ಪರಿಶೀಲನೆಯನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಈಗ ಪ್ರತಿ ಕಚೇರಿಯಲ್ಲಿಯೂ ಐರಿಸ್ ಸ್ಕ್ಯಾನ್ ಯಂತ್ರ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಇಲಾಖೆ ತಿಳಿಸಿವೆ.

ಎಲ್ಲಾ 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇದನ್ನು ಅಳವಡಿಸಿದ್ದೇವೆ. ಈ ಹಿಂದೆ ನಕಲಿ ಆಧಾರ್ ಕಾರ್ಡ್‌ ತಯಾರಿಸಿ ತಮ್ಮ ಹೆಸರಿಗೆ ಆಸ್ತಿ ನೋಂದಾಯಿಸಲು ಜನರು ನಡೆಸಿದ ಪ್ರಯತ್ನಗಳ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಬಯಸಿದ್ದೇವೆ. ನೋಂದಣಿಗೂ ಮುನ್ನಾ ಆಸ್ತಿ ನೋಂದಾಯಿಸಲು ಬಯಸುವ ವ್ಯಕ್ತಿಯ ಬೆರಳಚ್ಚು ಮತ್ತು ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಐರಿಸ್ ಸ್ಕ್ಯಾನ್ ಯಂತ್ರ ಪ್ರತಿದಿನ ಪರಿಶೀಲಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು  ಟಿಎನ್ಐಇಗೆ ತಿಳಿಸಿದರು ಎಂದು ವರದಿಯಾಗಿದೆ.

Also Read  ಭಟ್ಕಳ ಒಂದೇ ಮನೆಯ ನಾಲ್ವರ ಹತ್ಯೆ ಪ್ರಕರಣ ➤ ಆರೋಪಿ ಅರೆಸ್ಟ್

                                                                                

 

 

error: Content is protected !!
Scroll to Top