(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.05. ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ ಜರಗಲಿರುವ 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದು, ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಈ ಕೆಳಗಿನ ಸಾಧಕರಿಗೆ ಮಾ.7 ರಂದು ಅಪರಾಹ್ನ 3 ರಿಂದ 4 ಗಂಟೆಗೆ ಸನ್ಮಾನ ನೀಡಿ ಗೌರವಿಸಲಾಗುವುದು.
ಪ್ರೊ. ಅಭಯ ಕುಮಾರ್, (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ.) ಪ್ರೊ. ಎ.ವಿ. ನಾರಾಯಣ ಪುತ್ತೂರು (ಶಿಕ್ಷಣ,ಸಂಘಟನೆ), ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಪುತ್ತೂರು (ಸಾಹಿತ್ಯ), ಎ. ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ, (ಶಿಕ್ಷಣ), ಇ.ಎಸ್. ಗಫೂರ್ ವಿಟ್ಲ (ಪುಸ್ತಕ ಪರಿಚಾರಿಕೆ), ವಿಜಯಲಕ್ಷ್ಮೀ ವಳಲಂಬೆ, ಪೆರ್ವಾಜೆ, (ಮೂಲಿಕ ವೈದ್ಯೆ), ಮಹಾಬಲ ಕಲ್ಮಡ್ಕ, ಸುಳ್ಯ (ಪ್ರಸಾಧನ ಮುಖವರ್ಣಿಕೆ), ಪುತ್ತೂರು ವಿಶ್ವನಾಥ ನಾಯಕ್, (ಮೃದಂಗ ವಾದನ) ಶಿವರಾಮ ಏನೆಕಲ್ ಬಿಳಿನೆಲೆ (ಕ್ರೀಡೆ), ಜೆ.ಕೆ. ವಸಂತ ಸುಳ್ಯ, ನಿವೃತ್ತ ಸೇನಾಧಿಕಾರಿ (ವಾಯು ಸೇನೆ ), ದೇಜಪ್ಪ ಸರಪಾಡಿ, ಬಂಟ್ವಾಳ (ಜನಪದ), ನರೇಂದ್ರ ಕುಮಾರ್ ಧರ್ಮಸ್ಥಳ (ಯಕ್ಷಗಾನ), ಸುಜನಾ ಸುಳ್ಯ,(ಹಿರಿಯ ಯಕ್ಷಗಾನ ಕಲಾವಿದರು), ವಿಘ್ನ ರಾಜ ಕನ್ಯಾಡಿ, ಬೆಳ್ತಂಗಡಿ (ಹಸ್ತಪ್ರತಿ ನಿರ್ವಹಣೆ), ಗೋಪಾಲಕೃಷ್ಣ ಪ್ರಭು, ಸುರತ್ಕಲ್ (ಜನಪದ ಕಂಬಳ), ಮೂರ್ತಿ ದೇರಾಜೆ, ವಿಟ್ಲ (ರಂಗಭೂಮಿ), ಅಲಂಗಾರು ಈಶ್ವರ ಭಟ್, ಮೂಡಬಿದ್ರೆ (ಧಾರ್ಮಿಕ ಕ್ಷೇತ್ರ), ಡಾ. ಸುರೇಶ್ ರಾವ್ ಮುಂಬೈ( ಹೊರನಾಡ ಕನ್ನಡ ಸೇವೆ), ಪಿ.ಬಿ. ಹರೀಶ್ ರೈ, (ಪತ್ರಿಕೋದ್ಯಮ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಎಂ. ಮೀನಾಕ್ಷಿ ಗೌಡ (ಸಾಹಿತ್ಯ ಸಂಘಟನೆ), ಜಯಪ್ರಕಾಶ್ ಮೋಂಟಡ್ಕ (ರಂಗಭೂಮಿ) ಪ್ರಸಾದ್ ಮುನಿಯಂಗಳ (ವಾಸ್ತು), ಅನಂತ ಅಂಗಣ(ಕೃಷಿ), ಕೆ. ತನಿಯಪ್ಪ ಕೋಡಿಕಜೆ (ಜಾನಪದ), ಕುಂಬ್ಳೆ ಶ್ರೀಧರ್ ರಾವ್, (ಯಕ್ಷಗಾನ), ಮೈರ್ಪಾಡಿ ಶಂಕರನಾರಾಯಣ, ಪಣಂಬೂರು (ಯಕ್ಷಗಾನ),ಪಡ್ಡಂಬೈಲು ವೆಂಕಟರಮಣ ಗೌಡ (ಸಮಾಜ ಸೇವೆ), ಎ. ಎನ್. ಎಂ. ಎಚ್ ಇಸ್ಮಾಯಿಲ್, ಬೆಂಗಳೂರು (ಪತ್ರಿಕೋದ್ಯಮ)ಎಂ ಪುರುಷೋತ್ತಮ ಗೌಡ ಮಾಣಿಬೆಟ್ಟು(ಸಮಾಜ ಸೇವೆ) ಪಿ.ಎಸ್. ಕಾರಂತ, ವಾಪಿ ಗುಜರಾತ್ (ಹೊರನಾಡ ಕನ್ನಡ ಸೇವೆ) ಬಿ. ಬಾಲಚಂದ್ರ ರಾವ್ ನವಿಮುಂಬಯಿ (ಹೊರನಾಡ ಕನ್ನಡ ಸೇವೆ).
ಸಂಸ್ಥೆಗಳಾದ ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರ (ರಿ) ಬಂಟ್ವಾಳ, ರಂಗ ಕರ್ಮಿ ಬಿ.ವಿ. ಕಾರಂತ ರಂಗ ಭೂಮಿಕ ಟ್ರಸ್ಟ್ (ರಿ) ಮಂಚಿ, ಸುಬ್ರಹ್ಮಣ್ಯ ಸಭಾ ಸದನ (ರಿ) ಮಂಗಳೂರು, ಕೊಡಿಯಾಲ ಖಬರ ಕೊಂಕಣಿ ಪತ್ರಿಕೆ, ಮಂಗಳೂರು,ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಮೂಡಬಿದಿರೆ, ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಮತ್ತು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಇವರು ಸಂವಾದ ನಡೆಸಲಿದ್ದಾರೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರ ಪ್ರಕಟಣೆ ತಿಳಿಸಿದೆ.