200 ಆನೆಗಳ ಸಹಿತ ಕಾಡು ಪ್ರಾಣಿಗಳನ್ನು ಕೊಲ್ಲಲು ಅನುಮತಿಸಿದ ಜಿಂಬಾಬ್ವೆ

(ನ್ಯೂಸ್ ಕಡಬ) newskadaba.com ನಮೀಬಿಯಾ, ಸೆ. 18. ನಮೀಬಿಯಾದ ಬಳಿಕ ಭೀಕರ ಬರಗಾಲಕ್ಕೆ ತುತ್ತಾಗಿರುವ ಆಫ್ರಿಕಾ ಖಂಡದ ಇನ್ನೊಂದು ದೇಶ ಅಲ್ಲಿನ ಕಾಡು ಪ್ರಾಣಿಗಳನ್ನು ಕೊಲ್ಲಲ್ಲು ಅನುಮತಿ ನೀಡಿದ್ದು, ನಾವು ಸುಮಾರು 200 ಆನೆಗಳನ್ನು ಕೊಲ್ಲುತ್ತೇವೆ. ಅವುಗಳ ಮಾಂಸವನ್ನು ಅವಶ್ಯವಿರುವ ಸಮುದಾಯಗಳ ಜನರಿಗೆ ಹಂಚುತ್ತೇವೆ ಎಂದು ಜಿಂಬಾಬ್ವೆ ತಿಳಿಸಿದೆ.

ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ತಿನಶೆ ಫರವೊ ಪ್ರತಿಕ್ರಿಯಿಸಿ, ನಾವು ಅವಶ್ಯವಿರುವ ಸಮುದಾಯದ ಜನರಿಗೆ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ನೀಡುತ್ತೇವೆ. ಅದೇ ರೀತಿ ಹಂಚಿಕೆಯಾದ 200 ಪ್ರಾಣಿಗಳನ್ನು ಪ್ರಾಧಿಕಾರ ಕೊಲ್ಲಲಿದೆ. ಅನುಮತಿ ಪತ್ರ ವಿತರಿಸಿದ ನಂತರ ಪ್ರಾಣಿಗಳನ್ನು ಹತ್ಯೆ ಮಾಡುವ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು. 1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

error: Content is protected !!

Join the Group

Join WhatsApp Group