(ನ್ಯೂಸ್ ಕಡಬ) newskadaba.com ಕಡಬ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡು ದೇಶಾದ್ಯಂತ ಮತದಾರರು ಬಿಜೆಪಿ ಕಡೆ ಒಲವು ತೋರುತ್ತಿದ್ದು ಈಗಾಗಲೇ ಚುನಾವಣೆ ನಡೆದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ದೊರೆಯುತ್ತಿದ್ದು ಈವರೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಅಧಿಕಾರದಲ್ಲಿದ್ದ ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸುವುದರೊಂದಿಗೆ ಬಿಜೆಪಿ ಆಡಳಿತಕ್ಕೆ ಮುಂದಾಗಿದ್ದು ಮಾ.3 ರಂದು ಕಡಬದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ ಬಿಜೆಪಿ ಹಾಗೂ ಮೋದಿ ಸರಕಾರಕ್ಕೆ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಮಾಜಿ ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿ ದೇಶಾಧ್ಯಂತ ಮೋದಿ ಅಲೆಯು ಪ್ರಜ್ವಲಿಸುತ್ತಿದ್ದು ಜನರ ನಂಬಿಕೆಗೆ ತಕ್ಕಂತೆ ಆಡಳಿತ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡು ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಮುಕ್ತ ಸರಕಾರವನ್ನು ಬಯಸುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಈಗಾಗಲೇ ನಡೆದಿರುವ ರಾಜ್ಯಗಳ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ. ಮುಂದೆ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಮುಕ್ತ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ನಾಯಕಿ ಪುಲಸ್ತ್ಯಾ ರೈ ಮಾತನಾಡಿ ಸಬ್ಕಾ ಸಾಥ್ ಸಬ್ಕಾ ವಿಕಾಸ್, ಅಚ್ಚೇದಿನ್ ಆಯೇಗಾ ಎಂಬ ಧ್ಯೇಯ ವಾಕ್ಯದೊಂದಿಗೆ ಅಧಿಕಾರ ಹಿಡಿದ ಮೋದಿಜಿ ಈಗ ಅವರ ಸತ್ಯ ನಿಷ್ಟೆ ಪ್ರಾಮಾಣಿಕ ಆಡಳಿತಕ್ಕೆ ದೇಶಾಧ್ಯಂತ ಜನ ಮಾರು ಹೋಗಿದ್ದು ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಡಳಿತ ಸಂಪೂರ್ಣ ಬರಲಿದ್ದು ಮತದಾರರ ಒಲವು ಬಿಜೆಪಿಯತ್ತ ಎಂದ ಅವರು ನಮ್ಮ ಕನರ್ಾಟಕ ರಾಜ್ಯದಲ್ಲಿ ಕೂಡ 150+ ನೊಂದಿಗೆ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದರು.
ಕಡಬ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದಶರ್ಿ ಪ್ರಕಾಶ್ ಎನ್.ಕೆ, ಸುಳ್ಯ ಮಂಡಲ ಅಲ್ಪಸಂಖ್ಯಾತ ಮೋಚರ್ಾದ ಪ್ರಧಾನ ಕಾರ್ಯದಶರ್ಿ ಫಯಾಝ್ ಕೆನರಾ, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ, ಕೊಣಾಜೆ ಗ್ರಾ.ಪಂ.ಉಪಾಧ್ಯಕ್ಷ ಯಶೋದರ, ಬಿಳಿನೆಲೆ ಸಿ.ಎ ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ, ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಕ್, ಆದಂ ಕುಂಡೋಳಿ, ಗಿರೀಶ್ ಎ.ಪಿ, ಅಶೋಕ್ ಕುಮಾರ್ ಪಿ, ರಾಘವ ಕಳಾರ, ಜಗನ್ನಾಥ ರೈ ಕಳಾರ, ಆನಂದ ಕುಮಾರ್ ಕುಟ್ರುಪ್ಪಾಡಿ, ಲಕ್ಷ್ಮೀಶ ಕಡಬ, ಶ್ರೀಕಾಂತ್ ರಾವ್ ಕಡಬ, ತ್ಯಾಗರಾಜ್ ಮೊದಲಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡರು.