ಅಕ್ರಮ ಮದ್ಯ ಶೇಖರಣೆ: ಓರ್ವ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 18. ಅಡುಗೆ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.


ಗುಂಡ್ಲುಪೇಟೆ ತಾಲ್ಲೂಕು ನಿಟ್ರೆ ಗ್ರಾಮದ ಹಲವೆಡೆ ಅಬ್ಕಾರಿ ಅಧಿಕಾರಿಗಳು ಸಾಮೂಹಿಕ ದಾಳಿ ನಡೆಸಿದಾಗ ಗ್ರಾಮದ ಮಂಜು ಎಂಬ ಮನೆಯಲ್ಲಿ ಅಡುಗೆ ಕೋಣೆಯಲ್ಲಿ ನಿರ್ಮಿಸಿಕೊಂಡಿದ್ದ ರಹಸ್ಯ ಗೂಡಿನಲ್ಲಿ ಮದ್ಯ ಹಾಗೂ ಬಿಯರ್ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಮಂಜುರವರ ಮನೆಯ ಅಡುಗೆ ಮನೆಯ ರಹಸ್ಯಗೂಡಿನಲ್ಲಿ 8 ಲೀಟರ್ 550 ಮಿಲಿ ಮದ್ಯ ಹಾಗೂ ಬಿಯರ್ 5 ಲೀಟರ್ 500 ಮಿಲಿ ದೊರೆತ್ತಿದ್ದು, ಇದರ ಅಂದಾಜು ಮೌಲ್ಯ 4790 ರೂಪಾಯಿ ಎನ್ನಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ದೆಹಲಿ ನಾಯಿ ಮೇಲೆ ಅತ್ಯಾಚಾರ ➤ ಪಾಪಿ ವ್ಯಕ್ತಿಯ ಬಂಧನ!

 

error: Content is protected !!
Scroll to Top