ಕಾಂಗ್ರೆಸ್ಸನ್ನು ಟೀಕಿಸುವ ಭರದಲ್ಲಿ ಮಿಜೋರಾಂ ಮತ್ತು ನೇಪಾಳದ ಚಿತ್ರಗಳನ್ನು ಬಳಸಿದ ಬಿಜೆಪಿ ► ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿರುವ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.04. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುವ ಭರದಲ್ಲಿ ಬಿಜೆಪಿಯು ಎಡವಟ್ಟು ಮಾಡಿಕೊಂಡಿದ್ದು, ಮುಜುಗರಕ್ಕೆ ಸಿಲುಕಿದೆ.

ಮಿಜೋರಾಂ ಮತ್ತು ನೇಪಾಳದ ಚಿತ್ರಗಳನ್ನು ಬಳಸಿ ಬೆಂಗಳೂರಿನ ಹದಗೆಟ್ಟ ರಸ್ತೆಗಳು ಮತ್ತು ಕಸದ ರಾಶಿ ಎಂದು ಬಿಂಬಿಸುವ ಮೂಲಕ ಬಿಜೆಪಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗುತ್ತಿದೆ. ಕಳೆದ ಶುಕ್ರವಾರ ರಾಷ್ಟ್ರೀಯ ನಾಯಕರಾದ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್ ಸೇರಿದಂತೆ ಮತ್ತಿತರರು ಬಿಬಿಂಪಿಯ ಆಡಳಿತ ವೈಫಲ್ಯದ ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದರು. ಚಾರ್ಜ್ ಶೀಟ್ ನಲ್ಲಿ ಬೆಂಗಳೂರು ಮಹಾನಗರದಲ್ಲಿ ಹದಗೆಟ್ಟಿರುವ ರಸ್ತೆಗಳು, ಸಂಚಾರ ದಟ್ಟಣೆ, ಗುಂಡಿ, ಕಸದ ರಾಶಿ, ಮೂಲಭೂತ ಸೌಕರ್ಯಗಳ ಕೊರತೆ, ನೀರಿನ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಿಂಬಿಸಲಾಗಿತ್ತು. ಹತ್ತು ಪುಟಗಳ ಚಾರ್ಜ್‍ಶೀಟ್‍ನಲ್ಲಿ ತ್ರಿಪುರದ ಕಸದಗುಂಡಿಗಳು, ನೇಪಾಳದ ರಾಜಧಾನಿ ಕಠ್ಮುಂಡುವಿನಲ್ಲಿರುವ ಹಾಳಾದ ರಸ್ತೆಗಳ ಚಿತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ದ ಆರೋಪ ಮಾಡಲಾಗಿದೆ. ಇದೀಗ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿ, ಬಿಜೆಪಿ ವಿರುದ್ಧ ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ.

Also Read  ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್​ ಹತ್ಯೆ.!!

error: Content is protected !!
Scroll to Top