ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ರಿಂದ ಪ್ರತಿಭಟನೆ 

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17. ಆ್ಯಪಲ್ ಐಒಎಸ್ ಅಪ್ಡೇಟ್ ಬಳಿಕ ಮೊಬೈಲ್‌ಸ್ಕ್ರೀನ್‌ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲಾಂಕ್ ಆಗುವ ಸಮಸ್ಯೆಯಿಂದ ಗ್ರಾಹಕರು ತೊಂದರೆ ಅನುಭವಿಸುದ್ದು, ಅದನ್ನು ಬಗೆಹರಿಸುವಂತೆ ಒತ್ತಾಯಿಸಿ ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ಗಳು ಇಂದು ಪ್ರತಿಭಟನೆ ನಡೆಸಿದರು.


ಅಂಬೇಡ್ಕರ್ ಸರ್ಕಲ್‌ನಿಂದ ಆ್ಯಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್‌ನ ಎದುರುಗಡೆಯಿಂದ ಕ್ಲಾಕ್‌ ಟವರ್ ವರಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು ಆಗ್ರಹಿಸಿದರು. ಈ ವೇಳೆ ಮಾತಾಡಿದ ಶೈಲೇಂದ್ರ ಸರಳಾಯ, ನಮ್ಮಲ್ಲಿ ಹಾಗು ಬೇರೆ ಮೊಬೈಲ್ ಖರೀದಿಸಿದ ಹಲವು ಗ್ರಾಹಕರು ಈ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ. ನೊಂದ ಗ್ರಾಹಕರು ಆ್ಯಪಲ್‌ನ ಸರ್ವಿಸ್ ಮ್ಯಾಪಲ್ ಸೆಂಟರ್ ಅನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅವರ ಉಡಾಫೆ ಉತ್ತರ ನೀಡಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

Also Read  ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2,000 ರೂ.ನೀಡುವ 'ಗೃಹಲಕ್ಷ್ಮಿ' ಯೋಜನೆ

 

error: Content is protected !!
Scroll to Top