’ಅನುಮತಿಯಿಲ್ಲದೆ ಬುಲ್ಡೋಝರ್ ಕಾರ್ಯಾಚರಣೆ ಮಾಡುವಂತಿಲ್ಲ’- ಸುಪ್ರೀಂ ಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 17. ಸುಪ್ರೀಂಕೋರ್ಟ್ ಅನುಮತಿಯಿಲ್ಲದೆ ಬುಲ್ಡೋಝರ್ ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ. ‘ಬುಲ್ಡೋಜರ್ ಕ್ರಮಗಳ” ವಿರುದ್ಧದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ಬುಲ್ಡೋಝರ್ ಕಾರ್ಯಾಚರಣೆ ನಡೆಸಬಾರದು ಎಂದು ಆದೇಶವನ್ನು ನೀಡಿದೆ.

ನ್ಯಾಯಾಧೀಶರಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು, ವಿವಿಧ ರಾಜ್ಯ ಸರ್ಕಾರಗಳು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಕಟ್ಟಡಗಳನ್ನು ಶಿಕ್ಷಾರ್ಹ ಕ್ರಮವಾಗಿ ನೆಲಸಮಗೊಳಿಸುತ್ತಿರುವ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಈ ಕುರಿತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 1 ಕ್ಕೆ ಮುಂದೂಡಿದೆ. ಸಾರ್ವಜನಿಕ ರಸ್ತೆಗಳು, ಫುಟ್ಪಾತ್ಗಳು, ರೈಲು ಮಾರ್ಗಗಳು, ಜಲಮೂಲಗಳ ಅತಿಕ್ರಮಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Also Read  ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ವಿಪಕ್ಷಗಳಿಂದ ಭಾರೀ ವಿರೋಧ

 

error: Content is protected !!
Scroll to Top