ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 17. ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ವಿಶ್ವ ಹಿಂದಿ ದಿವಸ್ ಕಾರ್ಯಕ್ರಮವನ್ನು ಮಂಗಳವಾರದಂದು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸರಸ್ವತೀ ವಿದ್ಯಾಲಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎ ಆಗಮಿಸಿ ಹಿಂದಿ ಒಂದು ಭಾಷೆ ಅಲ್ಲ. ಸಂಸ್ಕೃತಿ, ವಿಚಾರ, ಅಭಿವ್ಯಕ್ತಿ ಹಿಂದಿಯನ್ನು ವ್ಯವಹಾರಿಕ ಕ್ಷೇತ್ರದಲ್ಲಿ ಬಳಸಲಾಗುತ್ತದೆ ಎಂದು ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಸರಸ್ವತೀ ಸಮೂಹ ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟರಮಣರಾವ್ ಮಂಕುಡೆ, ಭಾಷೆಯು ಅಂಕಕ್ಕೆ ಮಾತ್ರ ಸೀಮಿತವಾಗಿರದೆ ಭಾಷಾ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಪ್ರೌಢ ವಿಭಾಗದ ಮೇಲ್ವಿಚಾರಕರಾದ ಶ್ರೀಮತಿ ಪುಲಸ್ತ್ಯಾ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಪೂರ್ವಿತ್ ಎನ್ ಪಿ, ರಕ್ಷಾ ಎಂ ಜೆ, ಯಕ್ಷಿತ್ ಹಿಂದಿಯ ಮಹತ್ವವನ್ನು ತಿಳಿಸಿದರು ಹಾಗೂ ಪಿ ಆರ್ ಚೇತನ್ ಗೌಡ ಕವನವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಹಿಂದಿ ಭಾಷೆಗೆ ಸಂಬಂಧಿಸಿದ ನಾಟಕ, ನೃತ್ಯಗಳು ಮೂಡಿ ಬಂದವು. ವೇದಿಕೆಯಲ್ಲಿ ಪ್ರೌಢ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್, ಪ್ರೌಢ ವಿಭಾಗದ ಹಿಂದಿ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಬಿ ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತನುಶ್ರೀ ರೈ ಸ್ವಾಗತಿಸಿ ದೀಪ್ತಿ ವಂದಿಸಿದರು. ಸಿಂಚನ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join WhatsApp Group

WhatsApp Share