ಶೀಘ್ರದಲ್ಲೇ ಜನಗಣತಿ ಕಾರ್ಯ ಆರಂಭ- ಕೇಂದ್ರ ಗೃಹ ಸಚಿವ ಅಮಿತ್ ಶಾ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 17. ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಹೇಳಿದರು. ಎನ್‌ಡಿಎ ಸರ್ಕಾರವು 100 ದಿನಗಳನ್ನು ಪೂರೈಸಿದ ಅಂಗವಾಗಿ ಅಮಿತ್ ಶಾ, ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜನಗಣತಿ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದರು.

ನಾವು ಜನಗಣತಿಯನ್ನು ಘೋಷಣೆ ಮಾಡಿದಾಗ ಎಲ್ಲಾ ವಿವರಗಳು ಅದರಲ್ಲಿ ಸಿಗಲಿವೆ. 1881ರಿಂದಲೂ ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದೆ. ಜನಗಣತಿಯು 2020ರ ಏಪ್ರಿಲ್ 1ರಂದೇ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು ಎಂದು ಹೇಳಿದರು.

Also Read  ಇನ್ಮುಂದೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ...? - ಅರ್ಜಿ ಸಲ್ಲಿಕೆಗೆ ನ. 17ರಂದು ಕೊನೆಯ ದಿನಾಂಕ..!

error: Content is protected !!
Scroll to Top