(ನ್ಯೂಸ್ ಕಡಬ) newskadaba.com ಆಗ್ರಾ, ಸೆ. 17. ಇಲ್ಲಿನ ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ ಪ್ರೆಸ್ಗೆ ಹಸಿರು ಧ್ವಜವನ್ನು ಬೀಸುವ ಸ್ಪರ್ಧೆಯಲ್ಲಿ ಬಿಜೆಪಿಯ ಇಟಾವಾ ಶಾಸಕಿ ಸರಿತಾ ಬದೌರಿಯಾ ಅವರು ರೈಲ್ವೆ ಹಳಿಗಳ ಮೇಲೆ ಬಿದ್ದ ಘಟನೆ ನಡೆದಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ್ ರೈಲಿನ ವರ್ಚುವಲ್ ಉದ್ಘಾಟನೆಯ ನಂತರ, 20175 ಸಂಖ್ಯೆಯ ರೈಲಿಗೆ ಆಗ್ರಾದಿಂದ ರೈಲು ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಫ್ಲ್ಯಾಗ್ ಆಫ್ ಮಾಡಿದರು.ಈ ವೇಲೆ ಜಾರಿ ಹಳಿ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ. ನಂತರ ರೈಲನ್ನು ನಿಲ್ಲಿಸಿ ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ,ಶಾಸಕಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.