ತಂದೆಯ ಕನಸಿನಂತೆ ಐಎಎಸ್ ಅಧಿಕಾರಿಯಾದ ಮುದ್ರಾ ಗೈರೋಲಾ

(ನ್ಯೂಸ್ ಕಡಬ) newskadaba.com ಉತ್ತರಾಖಾಂಡ, ಸೆ. 17.  ತಂದೆ ತಾಯಿಯ ಕನಸನ್ನು ನನಸು ಮಾಡಲು ಮಕ್ಕಳು ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ಸಾಧಿಸುತ್ತಾರೆ. ಹೀಗೆ ತಂದೆಯ ಕನಸನ್ನು ನನಸಾಗಿಸಿಸಲು ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಮುದ್ರಾ ಗೈರೋಲಾ ಅವರ ಸ್ಫೂರ್ತಿದಾಯಕ ಕತೆ ಇದು.

ಮುದ್ರಾ ಉತ್ತರಾಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗಕ್ಕೆ ಸೇರಿದವರು. ಅವರು ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ಅವರು 10 ನೇ ತರಗತಿಯಲ್ಲಿ 96% ಮತ್ತು 12 ನೇ ಬೋರ್ಡ್ ಪರೀಕ್ಷೆಯಲ್ಲಿ 97% ಅಂಕಗಳನ್ನು ಪಡೆದರು. ತಂದೆಯ ಕನಸನ್ನು ನನಸಾಗಿಸಲು ಮುದ್ರ ಅವರು ಎಂಡಿಎಸ್ ತ್ಯಜಿಸಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ನಂತರದ ಎರಡು ಪ್ರಯತ್ನಗಳಲ್ಲೂ ಉತ್ತೀರ್ಣರಾಗಲೂ ವಿಫಲರಾಗುತ್ತಾರೆ. ನಂತರ 2021 ರಲ್ಲಿ ನಾಲ್ಕನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 165 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಮೂಲಕ ಐಪಿಎಸ್ ಈ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಆದ್ದರಿಂದ 2022 ರಲ್ಲಿ ಮುದ್ರಾ ಅವರು ಅಂತಿಮವಾಗಿ 53 ನೇ ರ‍್ಯಾಂಕ್ ಪಡೆದು ಯುಪಿಎಸ್‌ಸಿಯನ್ನು ಭೇದಿಸಿದರು ಹಾಗೂ ಅಂತಿಮವಾಗಿ ತಮ್ಮ ಐಎಎಸ್ ಅಧಿಕಾರಿಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.

Also Read  ಡ್ರಗ್ಸ್ ದಂಧೆ ಪ್ರಕರಣ ➤ ಬಿಜೆಪಿ ಮುಖಂಡ ಹಾಗೂ ಇಬ್ಬರು ಪುತ್ರರು ಪೊಲೀಸ್ ಬಲೆಗೆ

 

error: Content is protected !!
Scroll to Top