ಆಲಂಕಾರಿನಲ್ಲಿ ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.15. ವೈದ್ಯಕೀಯ ವೃತ್ತಿ ಉದ್ಯಮವಲ್ಲ, ಅದೊಂದು ಸೇವೆಯಾಗಿದ್ದು, ಜನರ ಅರೋಗ್ಯ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಸಮಾಜದ ಅರೋಗ್ಯ ಕಾಪಾಡುವುದು ವೈದ್ಯ ವೃತ್ತಿಯಲ್ಲಿ ಅಡಕವಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಭಾನುವಾರದಂದು ಕಡಬ ತಾಲೂಕಿನ ಆಲಂಕಾರು ಪೇಟೆಯಲ್ಲಿರುವ ಶ್ರೀ ಮಾತಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿಯ ಕ್ಲಿನಿಕ್, ಲ್ಯಾಬೋರೇಟರಿ ಹಾಗೂ ಜನರಲ್ ವಾರ್ಡ್ ಉದ್ಘಾಟಿಸಿ ಮಾತನಾಡಿದರು. ಕ್ಲಿನಿಕ್ ಗೆ ಬರುವ ರೋಗಿಗಳಿಗೆ ನಗುಮುಖದ ಸೇವೆಯೊಂದಿಗೆ ತೃಪ್ತಿದಾಯಕ ಚಿಕಿತ್ಸೆ ನೀಡಿದಾಗ ಸಮಾಜದಲ್ಲಿ ಉತ್ತಮ ಹೆಸರುಗಳಿಸಲು ಸಾಧ್ಯ. ವೈದ್ಯ ವಿದ್ಯೆ ಕಲಿತು ಊರು ಬಿಟ್ಟು ಪಟ್ಟಣದತ್ತ ತೆರಳುವ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಡಾ.ಕೃತಿ ಶೆಟ್ಟಿ ಅರೋಗ್ಯ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ವಾಸ್ತು ತಜ್ಞ ಮಹೇಶ ಮುನಿಯಂಗಳ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೋರ ರೋಗಿ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಸೇಸಪ್ಪ ರೈ ಕೆ, ಉಪ್ಪಿನಂಗಡಿ ಧನ್ವಂತರಿ ಕ್ಲಿನಿಕ್ ನ ಡಾ.ನಿರಂಜನ್ ರೈ, ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ, ಆಲಂಕಾರು ಮೂರ್ತೆದಾರ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ, ಆಲಂಕಾರು ಆಕಾರ್ ಅಸೋಸಿಯೇಟ್ಸ್ ನ ಸಿವಿಲ್ ಇಂಜೀನಿಯರ್ ಲಕ್ಷ್ಮೀ ನಾರಾಯಣ ಅಲೆಪ್ಪಾಡಿ ಶುಭಹಾರೈಸಿದರು.

Also Read  ಬೈಕ್ - ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಮಾತಾ ಕಾಂಪ್ಲೆಕ್ಸ್ ನ ಮಾಲಕ ಕುಶಾಲಪ್ಪ ಗೌಡ ಸುರುಳಿ, ವತ್ಸಲಾ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು. ಕ್ಲಿನಿಕ್ ನ ವೈದ್ಯೆ ಡಾ. ಕೃತಿ ಶೆಟ್ಟಿ ವಂದಿಸಿದರು. ಶಿಕ್ಷಕ ಪ್ರದೀಪ್ ಬಾಕಿಲ ನಿರೂಪಿಸಿದರು.

Also Read  Казино Pin Up Пин Ап Регистрируйся И Играй На Официальном Сайте

error: Content is protected !!
Scroll to Top