ಶೀಘ್ರವೇ ಎಪಿಎಲ್-ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 14. ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಹಾಗೂ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಲಿದ್ದು, ಸೆಪ್ಟೆಂಬರ್ 15 ರಿಂದ 30ರ ಒಳಗೆ ಯಾವುದಾದರೂ ಒಂದು ಅಥವಾ ಎರಡು ದಿನ ಅವಕಾಶ ನೀಡುವ ಸಾಧ್ಯತೆಯಿದೆ. ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಹೊಸದಾಗಿ ಮದುವೆಯಾದ ದಂಪತಿಗಳ ಕೂಡಾ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು-
ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಿಳಾಸದ ಪುರಾವೆ
ಜನ್ಮ ದಿನಾಂಕ ( ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ)
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.

Also Read  ಅಜ್ಜಿಯ ಆಸ್ತಿ ಕೊಳ್ಳೆ ಹೊಡೆದ ಮೊಮ್ಮಗಳು ➤ ವಿಚಾರ ತಿಳಿದು ಹಾಸಿಗೆ ಹಿಡಿದ ವೃದ್ಧೆ

ಕುಟುಂಬದ ಆದಾಯವನ್ನು ಪರಿಗಣಿಸಿ ಎಪಿಎಲ್ ನೀಡಬೇಕೋ ಅಥವಾ ಬಿಪಿಎಲ್ ನೀಡಬೇಕೋ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಅಥವಾ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

error: Content is protected !!
Scroll to Top