ಉಚಿತ ಆಧಾರ್ ಅಪ್ಡೇಟ್- ಡಿ.14ರ ವರೆಗೆ ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ಉಚಿತ ಆಧಾರ್ ಅಪ್ಡೇಟ್ ಗೆ ಗಡುವು ನಿಗದಿ ಮಾಡಿದ್ದ ಕೆಂದ್ರ ಸರಕಾರ ಇದೀಗ ಉಚಿತ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಡಿಸೆಂಬರ್ 14 ರವರೆಗೆ ದಿನಾಂಕ ವಿಸ್ತರಿಸಿ ಆದೇಶಿಸಲಾಗಿದೆ.


ಆಧಾರ್ ಕಾರ್ಡ್ ನಲ್ಲಿ ವಿವರಗಳನ್ನು ನಮೂದಿಸಿದಾಗ ಕೆಲವು ತಪ್ಪುಗಳಾಗುವ ಸಾಧ್ಯತೆಯಿದೆ. ಅಥವಾ ಅವರು ಬೇರೆ ಸ್ಥಳಕ್ಕೆ ವಲಸೆ ಹೋಗಬಹುದು. ಹುಟ್ಟಿದ ದಿನಾಂಕದ ವಿವರಗಳು ತಪ್ಪಾಗಿರಬಹುದು. ಇವುಗಳನ್ನು ಕಾಲಕಾಲಕ್ಕೆ ಸರಿಪಡಿಸುವುದು ಬಹಳ ಮುಖ್ಯ. ಇವುಗಳನ್ನು ಯಾವುದೇ ಸಮಯದಲ್ಲಿ ಸರಿಪಡಿಸಬಹುದು. 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ಗಳ ವಿವರಗಳನ್ನು ಉಚಿತವಾಗಿ ನವೀಕರಿಸಲು ಶನಿವಾರ(ಇಂದು) ಕೊನೆಯ ದಿನಾಂಕವಾಗಿತ್ತು. ಇದೀಗ ಇದನ್ನು ಡಿಸೆಂಬರ್ 14 ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಸಹಾಯದಿಂದ ನೀವು ಅಧಿಕೃತ ವೆಬ್ಸೈಟ್ https://myaadhar.uidai.gov.in ಲಾಗಿನ್ ಮಾಡಬಹುದು ಮತ್ತು ವಿವರಗಳನ್ನು ನವೀಕರಿಸಬಹುದು. ಬೆರಳಚ್ಚು, ಐರಿಸ್ ಸ್ಕ್ಯಾನ್ ಮತ್ತು ಮುಖದ ಚಿತ್ರಗಳಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಆನ್ ಲೈನ್ ನಲ್ಲಿ ನವೀಕರಿಸಲು ಸಾಧ್ಯವಿಲ್ಲ.

Also Read  ಮಂಗಳೂರು: ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಇಲಾಖೆಗಳು ಶಿಷ್ಟಾಚಾರ ಪಾಲಿಸಿ-ಸಿಇಒ

error: Content is protected !!
Scroll to Top