ಸ್ಟೀಲ್ ನಟ್‌ ಬಳಸಿ ಶಿವನ ಮಾದರಿಯ ಲೋಹ ಶಿಲ್ಪ ನಿರ್ಮಾಣ ’ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗೆ ದಾಖಲೆ

(ನ್ಯೂಸ್ ಕಡಬ) newskadaba.com ಕಟಪಾಡಿ, ಸೆ. 14.  ಇಲ್ಲಿನ ಕೋಟೆ ಗ್ರಾಮದ ಮಟ್ಟು ನಿವಾಸಿ ಅಮಿತ್ ಅಂಚನ್ ಅವರು ಸುಮಾರು 7,600 ಸ್ಟೀಲ್ ನಟ್‌ಗಳನ್ನು ಬಳಸಿ 3 ತಿಂಗಳಲ್ಲಿ ನಿರ್ಮಿಸಿದ ಶಿವನ ಮಾದರಿಯ ಲೋಹ ಶಿಲ್ಪ ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿರುತ್ತದೆ.

ಲೋಹದ ನಟ್ ಬಳಸಿ ಅಮಿತ್ ಅಂಚನ್ ನಿರ್ಮಿಸಿರುವ ಈ ಶಿಲ್ಪವು ‘ಯಂಗೆಸ್ಟ್ ಮೇಕ್ ಬಿಗ್ಗೆಸ್ಟ್ ಸ್ಕಲ್‌ಪ್ಚರ್ ಆಫ್ ಲಾರ್ಡ್ ಶಿವ’ ಎಂದು ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಲ್ಪಟ್ಟಿದೆ. ಈ ಕಲಾಕೃತಿಯು 3.5 ಅಡಿ ಎತ್ತರ 5 ಅಡಿ ಅಗಲ ಹೊಂದಿದೆ. ಅಮಿತ್ ಅಂಚನ್ ಅವರು ಪ್ರಗತಿಪರ ಕೃಷಿಕ ಮಟ್ಟು ಲಕ್ಷ್ಮಣ್ ಹಾಗೂ ಪ್ರಮೀಳಾ ದಂಪತಿಯ ಪುತ್ರ. ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿರುವ ಅಮಿತ್ ಅಂಚನ್ ಆರಂಭದಲ್ಲಿ ಮಣ್ಣಿನ ಮೂರ್ತಿ ತಯಾರಿಸಿ ಪ್ರತಿಕೃತಿಯನ್ನು ತೆಗೆದು ಬಳಿಕ 58 ಕಿಲೋ ನಟ್‌ಗಳನ್ನು ಬೆಸುಗೆ ಮಾಡಿ ಶಿವನನ್ನು ನಿರ್ಮಿಸಿದ್ದಾರೆ. ಯುವಕನ ಸಾಧನೆಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Also Read  ಆಕರ್ಷಣ ಮಂತ್ರ ದಿಂದ ಆಕರ್ಷಣೆ ಶಕ್ತಿ, ನೋಡಿ ದಿನ ಭವಿಷ್ಯದಲ್ಲಿ

 

error: Content is protected !!
Scroll to Top