1 ಬಿಲಿಯನ್ ಫಾಲೋವರ್ಸ್ – ಇತಿಹಾಸ ನಿರ್ಮಿಸಿದ ರೊನಾಲ್ಡೊ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಮೈದಾನದಲ್ಲಿ ಮಾತ್ರವಲ್ಲದೇ ಡಿಜಿಟಲ್ ಕ್ಷೇತ್ರದಲ್ಲಿಯೂ ದಾಖಲೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ 1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೊನಾಲ್ಡೊ ಅವರು ಇನ್ಸ್ಟಾಗ್ರಾಂ ನಲ್ಲಿ 639 ಮಿಲಿಯನ್, ಫೇಸ್ಬುಕ್ ನಲ್ಲಿ 170 ಮಿಲಿಯನ್, ಎಕ್ಸ್(X) ನಲ್ಲಿ 113 ಮಿಲಿಯನ್ ಮತ್ತು ಯೂಟ್ಯೂಬ್ ನಲ್ಲಿ 60.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನಲ್ ಆರಂಭಿಸಿದ ರೊನಾಲ್ಡೊ ಮೊದಲ ದಿನದಲ್ಲೇ 15 ಮಿಲಿಯನ್ ಮತ್ತು ಮೊದಲ ವಾರದಲ್ಲಿ 50 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದರು. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಪಡೆದ ಏಕೈಕ ಚಾನೆಲ್ ಎಂದು UR Cristiano ಯೂಟ್ಯೂಬ್ ಚಾನಲ್ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದೇ ಖ್ಯಾತಿ ಗಳಿಸಿರುವ ಕ್ರಿಸ್ಟಿಯಾನೋ ರೊನಾಲ್ಡೊ, ಸದ್ಯ ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್ಬಾಲ್ ಕ್ಲಬ್ ನಲ್ಲಿ ಆಡುತ್ತಿದ್ದು, ಜೊತೆಗೆ ಪೋರ್ಚುಗಲ್ ನ್ಯಾಷನಲ್ ಟೀಂನ್ನು ಪ್ರತಿನಿಧಿಸುತ್ತಾರೆ.

Also Read  ಪುತ್ತೂರು: ಬಾವಿಗೆ ಬಿದ್ದ ಜಿಂಕೆ

error: Content is protected !!
Scroll to Top