(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಆಗ್ರಾದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಜ್ ಮಹಲ್‌ನಲ್ಲಿ ನೀರು ಸೋರಿಕೆಯಾಗಿದೆ.
ಮುಖ್ಯ ಗುಮ್ಮಟದ ಮೇಲೆ ತೇವಾಂಶ ಗಮನಿಸಿದ ನಂತರ ಅಧಿಕಾರಿ ಗುಮ್ಮಟ ಬಿರುಕು ಬಿಟ್ಟಿರಬಹುದು ಎಂದು ಅಂದಾಜಿಸಿದ್ದರು. ಆದರೆ ಪರಿಶೀಲಿಸಿದಾಗ ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ದೇಶದಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ನೋಡಿಕೊಳ್ಳುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋರಿಕೆ ವರದಿಯಾದ ನಂತರ ತನ್ನ ಸಿಬ್ಬಂದಿಯನ್ನು ಕಣ್ಗಾವಲು ಇರಿಸಿದೆ. 17 ನೇ ಶತಮಾನದ ಸಮಾಧಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ.ಆಗ್ರಾ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಅವರು ತಪಾಸಣೆ ನಡೆಸಲು ಡ್ರೋನ್ ಕ್ಯಾಮೆರಾಗಳನ್ನು ಬಳಸಿದ್ದಾರೆ. ಏತನ್ಮಧ್ಯೆ, ಜಲಾವೃತಗೊಂಡ ಉದ್ಯಾನದ ದೃಶ್ಯಗಳು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಆತಂಕವನ್ನು ಹುಟ್ಟುಹಾಕಿದೆ.