ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ. 

 

ಸೂಟರ್ಪೇಟೆಯ ಜೋನಸ್ ಸ್ಯಾಮ್ಸನ್(40) ಪತ್ನಿ ವಿಕ್ಟೋರಿಯಾ ಮಥಾಯಿಸ್(47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು(34) ಪ್ರಕರಣದ ಆರೋಪಿಗಳು. ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ ಜೊತೆಗೆ ಚಿಟ್ ಫಂಡ್ ವ್ಯವಹಾರ ಮಾಡಿಕೊಂಡಿದ್ದರು. ಇದೇ ಚಿಟ್ಫಂಡ್ನಲ್ಲಿ ಆರೋಪಿ ಜೋನಸ್ ಸ್ಯಾಮ್ಸನ್ ಸೇರಿಕೊಂಡಿದ್ದು, ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡು ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹೀಗಾಗಿ ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರಾದರೂ ಸ್ಯಾಮ್ಸನ್ ಕಂತು ಪಾವತಿಸದೇ ನಿರ್ಲಕ್ಷ್ಯ ಮುಂದುವರಿಸಿದ್ದನು. ಕೇಳಿ ಕೇಳಿ ಬೇಸತ್ತ ಶ್ರೀಮತಿ ಶೆಟ್ಟಿ 2019 ಮೇ.11ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹಣ ಕೇಳುವುದಕ್ಕೆ ಸ್ಯಾಮ್ಸನ್ ಮನೆಗೆ ತೆರಳಿದ್ದರು. ಮನೆಗೆ ಬಂದು ಕೇಳಿದ್ರೂ ಹಣ ಕೊಡದ್ದಕ್ಕೆ ಕೋಪಗೊಂಡು ಬೈದಿದ್ದ ಶ್ರೀಮತಿ ಶೆಟ್ಟಿಯವರ ತಲೆಗೆ ಆರೋಪಿ ಮರದ ತುಂಡಿನಿಂದ ತಲೆಗೆ ಹೊಡೆದಿದ್ದನು. ಇದರಿಂದ ಪ್ರಜ್ಞಾಹೀನಳಾಗಿ ಬಿದ್ದಿದ್ದ ಶ್ರೀಮತಿ ಶೆಟ್ಟಿಯನ್ನು ಆರೋಪಿ ಜೋನಸ್ ಪತ್ನಿ ವಿಕ್ಟೋರಿಯಾ, ಬಚ್ಚಲು ಮನೆಗೆ ಎಳೆದೊಯ್ದು ಮೈಮೇಲಿನ ಚಿನ್ನಾಭರಣ ದೋಚಿದ ಬಳಿಕ ಚಿನ್ನಾಭರಣಗಳನ್ನು ಮೂರನೇ ಆರೋಪಿ ರಾಜುಗೆ ನೀಡಿದ್ದಳು.

Also Read  ಲಾರಿ ಢಿಕ್ಕಿ- ಯುವಕ ಮೃತ್ಯು

ಕೊಲೆ ಮಾಡಿದ ವಿಚಾರ ತಿಳಿದರೂ ಮೂರನೇ ಆರೋಪಿ ರಾಜು ಚಿನ್ನಾಭರಣ ಪಡೆದುಕೊಂಡು ಆರೋಪಿಗಳಿಗೆ ಆಶ್ರಯ ನೀಡಿದ್ದರಿಂದ  ಆತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಮತ್ತೆ ಪುನಃ ಬಂಧಿಸಿದ್ದ ಪೊಲೀಸರು ಶ್ರೀಮತಿ ಶೆಟ್ಟಿ ಹತ್ಯೆಯ ಇಡೀ ಪ್ರಕರಣದ ತನಿಖೆಯಾಗಿ ಮಂಗಳೂರು ಪೂರ್ವ ಪೊಲೀಸ್ಠಾಣೆಯ ಇನ್ಸ್ಪೆಕ್ಟರ್ಮಹೇಶ್ಎಂ. ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮೂವರು ಆರೋಪಿಗಳ ಕೃತ್ಯ ಸಾಬೀತಾಗಿರುವ ಹಿನ್ನೆಲೆ ತೀರ್ಪು ನೀಡಿದ ಕೋರ್ಟ್ ಆರೋಪಿಗಳಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ನ್ಯಾಯಾಲಯ ಸೆ. 17ರಂದು ಪ್ರಕಟಿಸಲಿದೆ.

error: Content is protected !!
Scroll to Top