ಸುಳ್ಯ: KSRTC ಚಾಲಕರ ಸಂಬಳ ಕಡಿತ ಆರೋಪ- ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 14. ಕೆಎಸ್ಸಾರ್ಟಿಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಪುತ್ತೂರು ವಿಭಾಗದ ಕೆಲ ಚಾಲಕರಿಗೆ ಸಂಬಳ ಕಡಿತಗೊಳಿಸಿ ಪಾವತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಅಸಮಾಧಾನಗೊಂಡ ಗುತ್ತಿಗೆ ಆಧಾರಿತ ಚಾಲಕರು ಕರ್ತವ್ಯಕ್ಕೆ ಗೈರಾಗಿ ಶನಿವಾರದಂದು ಪ್ರತಿಭಟನೆ ನಡೆಸುತ್ತಿದ್ದಾರೆ.


ಸುಳ್ಯ ಕೆ.ಎಸ್‌.ಆರ್.ಟಿ.ಸಿ. ಘಟಕದಲ್ಲಿ ಈ ಮೊದಲು ಪನ್ನಗ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 9 ಚಾಲಕರಿಗೆ 11 ತಿಂಗಳು ಸಮರ್ಪಕವಾಗಿ ಸಂಬಳ ನೀಡಲಾಗಿತ್ತು. ತಿಂಗಳ ಹಿಂದೆ ಆ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದಿದ್ದು, ಬಳಿಕ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಸಂಸ್ಥೆಯವರು ಗುತ್ತಿಗೆ ಪಡೆದು ಚಾಲಕರನ್ನು ನೇಮಕ ಮಾಡಿದ್ದರು. ಅವರು ನೇಮಕ ಮಾಡುವ ಸಂದರ್ಭ ಚಾಲಕರ ಬೇಡಿಕೆಯಂತೆ ಸಂಬಳ ಕಡಿತ ಮಾಡುವುದಿಲ್ಲ, ಮತ್ತಿತರ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ತಿಂಗಳ ಸಂಬಳದಲ್ಲಿ 5 ಸಾವಿರಕ್ಕೂ ಅಧಿಕ ಹಣ ಕಡಿತ ಮಾಡಲಾಗಿದ್ದು, ಕೆಲವರಿಗೆ 10 ಸಾವಿರದವರೆಗೆ ಕಡಿತ ಮಾಡಲಾಗಿದೆ. ಇನ್ನಿಬ್ಬರಿಗೆ ಸಂಬಳವೇ ಬಂದಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ. ಇದರಿಂದಾಗಿ ಸುಳ್ಯ ಘಟಕ ವ್ಯಾಪ್ತಿಯಲ್ಲಿ ಸುಮಾರು 9 ಚಾಲಕರಿಗೆ ಅನ್ಯಾಯ ಆಗಿದೆ ಎಂದು ಅವರು ಕೆಲಸಕ್ಕೆ ಗೈರಾಗಿ ಪ್ರತಿಭಟಿಸುತ್ತಿದ್ದಾರೆ‌.

error: Content is protected !!

Join the Group

Join WhatsApp Group