ಮಾರ್ಚ್‌ 06 ರಂದು ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ ► ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.03. ಜಿಲ್ಲೆಯಲ್ಲಿ ಆಗಿರುವ ಬಿ.ಜೆ.ಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣವನ್ನು ಸಿಬಿಐ ಗೆ ವಹಿಸಿಕೊಡಬೇಕು ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರ್ಚ್ 06 ರಂದು ನಡೆಯಲಿರುವ ‘ಮಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಇಂದು (ಮಾ.03) ಸಂಸದ ಪ್ರತಾಪಸಿಂಹ ಮತ್ತು ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಕುಶಾಲನಗರದಿಂದ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮತ್ತು ಅನಂತ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ಅಂಕೋಲಾದಿಂದ ಯಾತ್ರೆ ಪ್ರಾರಂಭವಾಗಲಿದ್ದು, ಮಾ. 06 ರಂದು ಮಂಗಳೂರಿನಲ್ಲಿ ಸಮಾಪನಗೊಳ್ಳಲಿದೆ.

Also Read  ಕಡಬ: ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟು ಕಳ್ಳತನ

error: Content is protected !!
Scroll to Top