ಭತ್ತದ ಪೋಷಕಾಂಶಗಳ ನಿರ್ವಹಣೆಯ ವಿಧಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ನಾಟಿ ಮಾಡುವ 2-3 ವಾರಗಳ ಮೊದಲು 2-3 ಟನ್ ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ 200 ಕಿ.ಗ್ರಾಂ ಕೃಷಿ ಸುಣ್ಣವನ್ನು ಕೆಸರು ಗದ್ದೆ ಮಾಡುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ ಶಿಫಾರಸ್ಸು ಮಾಡಿದ ಗೊಬ್ಬರ- 24 ಕಿ.ಗ್ರಾಂ. – ಸಾರಜನಕ, 12 ಕಿ.ಗ್ರಾಂ– ರಂಜಕ, 24 ಕಿ.ಗ್ರಾಂ –ಪೋಟ್ಯಾಷ್ ಮತ್ತು 10 ಕಿ.ಗ್ರಾಂ – ಜಿಂಕ್ ಸಲ್ಫೇಟ್. ಶೇ.50 ಸಾರಜನಕ (25 ಕಿ.ಗ್ರಾಂ ಯೂರಿಯಾ) + ಶೇ.100 ಪೂರ್ತಿ ರಂಜಕ (60 ಕಿ.ಗ್ರಾಂ ರಾಕ್ ಫಾಸ್ಫೇಟ್) +  ಶೇ.50 ಪೋಟ್ಯಾಷ್ (20 ಕಿ.ಗ್ರಾಂ ಎಂ.ಒ.ಪಿ) ನಾಟಿ ಮಾಡುವ ಸಮಯದಲ್ಲಿ ಒದಗಿಸಬೇಕು. ಉಳಿದ ಶೇ.25 ಸಾರಜನಕ (12.5 ಕಿ.ಗ್ರಾಂ ಯೂರಿಯಾ) + ಶೇ.25 ಪೋಟ್ಯಾಷ್ (10 ಕಿ.ಗ್ರಾಂ ಎಂ.ಓ.ಪಿ) ವನ್ನು 25-30 ದಿವಸಗಳಲ್ಲಿ ಮೇಲು ಗೊಬ್ಬರವಾಗಿ ಕೊಡಬೇಕು. ಇನ್ನುಳಿದ ಶೇ.25 ಸಾರಜನಕ (12.5 ಕಿ.ಗ್ರಾಂ ಯೂರಿಯಾ) + ಶೇ.25 ಪೋಟ್ಯಾಷ್ (10 ಕಿ.ಗ್ರಾಂ ಎಂ.ಓ.ಪಿ) ವನ್ನು 55-60 ದಿವಸಗಳಲ್ಲಿ ಕೊಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group