ಪರಿಶಿಷ್ಟ ಜಾತಿಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳಿಗೆ ಡಾ: ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ದಿ ನಿಗಮಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಗಳು:
ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ. ಘಟಕ ವೆಚ್ಚ ರೂ.1.00 ಲಕ್ಷ ಇದರಲ್ಲಿ ಸಹಾಯಧನ ರೂ.50,000/- ಹಾಗೂ ಸಾಲ ರೂ. 50,000/- (ಶೇಕಡ 4 ರಷ್ಟು ಬಡ್ಡಿದರ)
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ : ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಬ್ಯಾಂಕ್ ಸಾಲದ ಶೇ.20 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.1.00 ಲಕ್ಷ. ಘಟಕ ವೆಚ್ಚದ ಶೇ.70 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.2.00 ಲಕ್ಷ.
ಸ್ವಾವಲಂಬಿ ಸಾರಥಿ: ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಸಾಲದ ಮೊತ್ತ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ. 4.00 ಲಕ್ಷ
ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ: ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ ರೂ.2.50 ಲಕ್ಷ ಇದರಲ್ಲಿ ಸಹಾಯಧನ ರೂ.1.50 ಲಕ್ಷ ಹಾಗೂ ಸಾಲ ರೂ.1.00 ಲಕ್ಷ (ಶೇಕಡ 4ರಷ್ಟು ಬಡ್ಡಿದರ)
ಭೂ ಒಡೆತನ ಯೋಜನೆ : ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುತ್ತದೆ. ಘಟಕ ವೆಚ್ಚ ರೂ.25.00 ಲಕ್ಷ / ರೂ. 20.00 ಲಕ್ಷ ಸಹಾಯಧನ ಶೇ.50% ಹಾಗೂ ಸಾಲ ಶೇ.50% (ಶೇಕಡ 6 ರಷ್ಟು ಬಡ್ಡಿದರ)
ಗಂಗಾ ಕಲ್ಯಾಣ ಯೋಜನೆ : 1.20 ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಘಟಕ ವೆಚ್ಚ ರೂ. 4.75 ಲಕ್ಷ/ ರೂ. 3.75 ಲಕ್ಷ. ಇದರಲ್ಲಿ ರೂ. 50,000/- ಸಾಲವೂ ಸೇರಿರುತ್ತದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನ. ಅರ್ಜಿಗಳನ್ನು ಹತ್ತಿರದ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬೇಕು. ಅರ್ಜಿಗಳನ್ನು ವೆಬ್‍ಸೈಟ್ ವಿಳಾಸ https://sevasindhu.karnataka.gov.in ಮೂಲಕ ಸಲ್ಲಿಸಬೇಕು.
ನಿಗಮದ ನಿರ್ದೇಶಕ ಮಂಡಳಿ, ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ನಿಗಮಗಳ ವೆಬ್‍ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ 9482300400 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಐಪಿಎಲ್- ಮೆಗಾ ಹರಾಜಿಗೆ ಮುಹೂರ್ತ ಫಿಕ್ಸ್..!

error: Content is protected !!
Scroll to Top