ಗುತ್ತಿಗಾರು: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಧಾನ ಮಂತ್ರಿಗೆ ದೂರು ನೀಡಿದ ಯುವಕ ► ಪ್ರಧಾನ ಮಂತ್ರಿ ಕಛೇರಿಯಿಂದ ಕಾಮಗಾರಿ ಪರಿಶೀಲನೆಗೆ ಆದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.03. ಬಳ್ಪ-ಕಮಿಲ-ಗುತ್ತಿಗಾರು ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮತ್ತು ಅವ್ಯವಹಾರ ನಡೆದಿದೆ ಎಂದು ಕಮಿಲದ ಯುವಕನೋರ್ವ ಪ್ರಧಾನಮಂತ್ರಿಗಳಿಗೆ ದೂರು ನೀಡಿದ್ದು, ಅದರಂತೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸಂಬಂಧಪಟ್ಟ ಇಲಾಖೆಗಳಿಗೆ ತನಿಖೆ ನಡೆಸುವಂತೆ ಸೂಚನೆ ಬಂದಿದೆ.

ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಬಳ್ಪ-ಕಮಿಲ-ಗುತ್ತಿಗಾರು ರಸ್ತೆಯ ಅಭಿವೃದ್ಧಿ ಕಾಮಗಾರಿಯು ಕಳಪೆಯಾಗಿದೆ ಮತ್ತು ಅವ್ಯವಹಾರವಾಗಿದೆ ಎಂದು ಕಮಿಲ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ ಎಂಬವರು ಪ್ರಧಾನಮಂತ್ರಿಯವರಿಗೆ ಇ-ಮೈಲ್ ಮೂಲಕ ದೂರು ನೀಡಿದ್ದರು. ಪ್ರಧಾನಮಂತ್ರಿಗಳ ಕಾರ್ಯಾಲಯವು ಜಿಲ್ಲಾ ಪಂಚಾಯತ್‌ಗೆ ಈ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದ್ದು, ಅವರು ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗಕ್ಕೆ ಇದರ ಪರಿಶೀಲನೆ ನಡೆಸುವಂತೆ ಪತ್ರ ಬರೆದಿದ್ದಾರೆ.

Also Read  ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ಗೆ..? ➤ ಕಾಗೆ ಹಾರಿಸಿದ ರಾಜು ಕಾಗೆ

error: Content is protected !!
Scroll to Top