ಕಡಬ: ನಿವೃತ್ತ ಸೈನಿಕ ಅಂಗಣ ಸುಂದರ ಗೌಡ ನಿಧನ + ನಿವೃತ್ತ ಸೈನಿಕರ ಸಂಘದಿಂದ ಗೌರವಾರ್ಪಣೆ

ಕಡಬ, ಸೆ.14. ನಿವೃತ್ತ ಸೈನಿಕ ಅಂಗಣ ಸುಂದರ ಗೌಡ(60ವ.) ಅವರು ಸೆ.13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರಿಗೆ ಸೆ.12ರಂದು ಹೃದಯಾಘಾತವಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರು ಪಿಜಕ್ಕಳ‌ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಕ್ರೀಯ ಸದಸ್ಯರಾಗಿ ಕಡಬದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಶನಿವಾರ ಬೆಳಿಗ್ಗೆ 9 ಗಂಟೆಗೆ ನಿವೃತ್ತ ಸೈನಿಕರ ಸಂಘದಿಂದ ಗೌರವಾರ್ವಪಣೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Also Read  ವಿವಿ ಕಾಲೇಜಿಗೆ 150 :  ಮುಕ್ತ ಛಾಯಾಗ್ರಹಣ ಸ್ಪರ್ಧೆ

error: Content is protected !!
Scroll to Top