ವಾಮಾಚರ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ..!

(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಸೆ. 13.  ವಾಮಾಚಾರ ನಡೆಸುತ್ತಿರುವ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹರಿತವಾದ ಆಯುಧಗಳು ಹಾಗೂ ಸುತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಲೋಡಬಝಾರ್-ಭಾತಪರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಮೃತರನ್ನು ಚೈತ್ರಮ್ ಕೈವರ್ತ್ಯ (47), ಆತನ ಸಹೋದರಿಯರಾದ ಜಮುನಾ (28) ಮತ್ತು ಯಶೋಧಾ (30) ಹಾಗೂ ಜಮುನಾ ಪುತ್ರ ಯಶ್ ಎಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಹರಿತವಾದ ಆಯುಧಗಳು ಹಾಗೂ ಸುತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೈಯ್ಯಲಾಗಿದೆ. ಚೈತ್ರಮ್ ಕೈವರ್ತ್ಯ ಅವರ ಕುಟುಂಬದ ಮೇಲೆ ಹಲ್ಲೆಗೈದ ಸಂದರ್ಭದಲ್ಲಿ ಅವರ ತಾಯಿ ಮನೆಯಲ್ಲಿರಲಿಲ್ಲ ಎಂದೂ ಆತ ತಿಳಿಸಿದ್ದಾನೆ. ಈ ಸಂಬಂಧ ಪಟ್ಲೆ ಮತ್ತು ಆತನ ಇಬ್ಬರು ಪುತ್ರರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಅಕ್ರಮವಾಗಿ ತಂಬಾಕು ಉತ್ಪನ್ನ ಸಾಗಾಟ - ಇಬ್ಬರ ಬಂಧನ

 

 

error: Content is protected !!
Scroll to Top