ಭಾರತ ವಿರುದ್ಧ  2 ಪಂದ್ಯಗಳ ಟೆಸ್ಟ್‌ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

(ನ್ಯೂಸ್ ಕಡಬ) newskadaba.com ಢಾಕಾ, ಸೆ. 13.  ಭಾರತ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟಗೊಂಡಿದೆ. ನಜ್ಮುಲ್‌ ಹೊಸೈನ್‌ ಶಾಂಟೊ ತಂಡದ ನಾಯಕತ್ವ ವಹಿಸಲಿದ್ದಾರೆ. ಗಾಯಾಳು ವೇಗಿ ಶೊರೀಫುಲ್‌ ಇಸ್ಲಾಂ ಬದಲು ಜಾಕರ್‌ ಅಲಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಉಳಿದಂತೆ ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಆಡಿದ್ದ ಆಟಗಾರರೇ ತಂಡದಲ್ಲಿದ್ದಾರೆ. 23 ವರ್ಷದ ಶೊರೀಫುಲ್ ಇಸ್ಲಾಂ, ಪಾಕಿಸ್ತಾನ ಎದುರಿನ ರಾವಲ್ಪಿಂಡಿ ಟೆಸ್ಟ್‌ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದರು, ಆದರೆ ಗಾಯದ ಸಮಸ್ಯೆಯಿಂದಾಗಿ ಪಾಕ್ ಎದುರಿನ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಹಿರಿಯ ಆಟಗಾರರಾದ ಲಿಟನ್‌ ದಾಸ್‌, ಶಕೀಬ್‌ ಅಲ್‌ ಹಸನ್‌, ಮುಷ್ಫಿಕುರ್‌ ರಹೀಂ ತಂಡದಲ್ಲಿರುವ ಪ್ರಮುಖರು. ತಸ್ಕೀನ್‌ ಅಹ್ಮದ್‌, ಮೆಹಿದಿ ಹಸನ್‌ ಕೂಡಾ ತಂಡದಲ್ಲಿದ್ದಾರೆ. ಸೆ.19ರಿಂದ ಮೊದಲ ಟೆಸ್ಟ್‌ ಆರಂಭಗೊಳ್ಳಲಿದ್ದು, ಚೆನ್ನೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಳಿಕ 2ನೇ ಟೆಸ್ಟ್ ಸೆ.27ರಿಂದ ಕಾನ್ಪುರದಲ್ಲಿ ನಡೆಯಲಿದೆ.

Also Read  'ಸೆಂಟರ್‌ ಆಫ್ ಎಕ್ಸಲೆನ್ಸ್‌ ಕ್ರಿಕೆಟ್‌ ಅಕಾಡೆಮಿ'  ದಿಢೀರ್‌ ಉದ್ಘಾಟನೆ ಮಾಡಿದ ಬಿಸಿಸಿಐ

 

error: Content is protected !!
Scroll to Top