ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಮಾನವ ಸರಪಳಿ – ಪರ್ಯಾಯ ಮಾರ್ಗ ಬಳಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಸೆಪ್ಟೆಂಬರ್ 15 ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿರುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ-ಹೆಜಮಾಡಿ ಗಡಿಯಿಂದ ನಂತೂರು ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 73 ರ ಅರ್ಕುಳ- ಫರಂಗಿಪೇಟೆವರೆಗೆ ಶಾಲಾ ಮಕ್ಕಳು ಬೆಳಿಗ್ಗೆ ಸುಮಾರು 07.30 ಗಂಟೆಯಿಂದ 11.00 ರವರರೆಗೆ ಮಾನವ ಸರಪಳಿಯನ್ನು ನಿರ್ಮಿಸುವ ಸಮಯ ಹಾಗೂ ಶಾಲಾ ಮಕ್ಕಳ ಆಗಮನ ಮತ್ತು ನಿರ್ಗಮನದ ಸಮಯ ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹೆಜಮಾಡಿ ಬಪ್ಪನಾಡು – ಮುಲ್ಕಿ – ಕಾರ್ನಾಡು ಹಳೆಯಂಗಡಿ – ಪಾವಂಜೆ – ಮುಕ್ಕ – ಸುರತ್ಕಲ್ – ಹೊಸಬೆಟ್ಟು – ಹೊನ್ನಕಟ್ಟೆ – ಬೈಕಂಪಾಡಿ – ಪಣಂಬೂರು ಕೂಳೂರು ಕೊಟ್ಟರಚೌಕಿ ಕುಂಟಿಕಾನ ಕೆಪಿಟಿ ವೃತ್ತ ಪದವು ಜಂಕ್ಷನ್ ನಂತೂರು ವೃತ್ತ ಬಿಕರ್ನಕಟ್ಟೆ – ಕೈಕಂಬ – ಪಡಿಲ್ ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ವಳಚ್ಚಿಲ್ ಅರ್ಕುಳ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು 73 ರಲ್ಲಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕರು / ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸದ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.

Also Read  ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ

error: Content is protected !!
Scroll to Top