ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಿರಾಜ್ ಆಳ್ವಗೆ ಬೆಳ್ಳಿಯ ಪದಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 13.  ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’ ಕರಾಟೆ ಸ್ಪರ್ಧೆಯ 13 ವರ್ಷದ ವಿಭಾಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಮಿರಾಜ್ ಆಳ್ವ ಕಟಾದಲ್ಲಿ ಬೆಳ್ಳಿಪದಕವನ್ನು ಪಡೆದಿದ್ದಾನೆ.


ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ಈ ಚಾಂಪಿಯನ್ ಶಿಪ್ ನಡೆಯಿತು. ಪೆರ್ನೆ ನಿವಾಸಿಯಾಗಿರುವ ಈತ ಪ್ರಮೋದ್ ಆಳ್ವ ಮತ್ತು ಕುಸುಮಾವತಿ ದಂಪತಿಯ ಪುತ್ರನಾಗಿದ್ದು, ಸೆನ್ಸಾಯಿ ಮೋಹನ್ ಪೂಜಾರಿ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.

Also Read  ಐದು ಮತ್ತು ಎಂಟನೇ ತರಗತಿ ಬೋರ್ಡ್ ಎಕ್ಸಾಂಗೆ ಸುಪ್ರೀಂ ಅಸ್ತು

 

error: Content is protected !!
Scroll to Top