ಎಸ್ಕೆಎಸ್ಸೆಸ್ಸೆಫ್‌ ಟ್ರೆಂಡ್ ಜಿಲ್ಲಾ ಸಂಚಾಲಕರಾಗಿ ಇಕ್ಬಾಲ್ ಬಾಳಿಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಎಸ್ಕೆಎಸ್ಸೆಸ್ಸೆಫ್‌ ಇದರ ಉಪ ಸಮಿತಿ ವಿದ್ಯಾಭ್ಯಾಸ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸುವ ಟ್ರೆಂಡ್ ಸಮಿತಿ ಇದರ ರೂವಾರಿಯಾಗಿ ಲೇಖಕ ಯುವ ವಾಗ್ಮಿ ಕೆ.ಎಂ.ಇಕ್ಬಾಲ್ ಬಾಳಿಲ ಆಯ್ಕೆಗೊಂಡಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಸ್ಕೆಎಸ್ಸೆಸ್ಸೆಫ್‌ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹಲವು ಉಪ ಸಮಿತಿಗಳನ್ನು ಜಾರಿಗೆ ತಂದಿರುತ್ತದೆ. ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ನಿರ್ವಹಿಸಲು ಟ್ರೆಂಡ್ ಎಂಬ ಹೆಸರಿನ ಉಪ ಸಮಿತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ನಾನಾ ರಾಜ್ಯಗಳಲ್ಲಿ ಟ್ರೆಂಡ್ ವಿಶೇಷ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿವೆ. ದೇಶದ ವಿವಿಧ ಕಡೆಗಳಲ್ಲಿ ಜಾತಿ ಮತ ಭೇದವಿಲ್ಲದೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿವೆ. ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ  ಎಸ್ಕೆಎಸ್ಸೆಸ್ಸೆಫ್‌ ಮಹಾ ಸಭೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಟ್ರೆಂಡ್ ಸಮಿತಿಯ ಕನ್ವಿನರ್ ಆಗಿ ಇಕ್ಬಾಲ್ ಬಾಳಿಲರನ್ನು ಆಯ್ಕೆ ಮಾಡಲಾಯಿತು. ಪತ್ರಕರ್ತರಾಗಿ, ಸೆಲ್ಫ್ ಡೆವೆಲೆಪಮೆಂಟ್ ಸೊಸೈಟಿ ರಾಜ್ಯಮಟ್ಟದ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಉತ್ತಮ ಸಂಘಟಕರೂ, ಸಾಹಿತಿಯೂ, ವಾಗ್ಮಿಯೂ ಆಗಿರುತ್ತಾರೆ.

Also Read  ನಾಳೆ (ಫೆ.27) ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ ಸಂಭ್ರಮ

error: Content is protected !!
Scroll to Top