(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 13. ಇತ್ತೀಚೆಗೆ ತರಬೇತಿ ವಿಮಾನಗಳು ಭಾಗಿಯಾಗಿರುವ ಅಪಘಾತಗಳು ಉಂಟಾಗಿರುವ ಹಿನ್ನೆಲೆ ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ವಿಶೇಷ ಲೆಕ್ಕ ಪರಿಶೋಧನೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಆದೇಶಿಸಿದೆ.
ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ಸೆಪ್ಟೆಂಬರ್ ನಿಂದ ನವೆಂಬರ್ 2024ರ ವರೆಗೆ ಮೂರು ಹಂತದಲ್ಲಿ ನಡೆಸಲಾಗುತ್ತದೆ. ಈ ವಿಶೇಷ ಲೆಕ್ಕ ಪರಿಶೋಧನೆಯು 33 ವಿಮಾನ ಹಾರಾಟ ತರಬೇತಿ ಸಂಸ್ಥೆಗಳನ್ನು ಒಳಗೊಳ್ಳಲಿದೆ. ಈ ಹಿಂದೆ ಇಂತಹ ವಿಶೇಷ ಲೆಕ್ಕ ಪರಿಶೋಧನೆಯನ್ನು 2022ರಲ್ಲಿ ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ಸರಣಿ ತರಬೇತಿ ವಿಮಾನಗಳ ಅಪಘಾತದ ಪ್ರಕರಣಗಳು ನಡೆದಿದೆ.