ಅಂಜನಾದ್ರಿ- ಪಂಪಾಸರೋವರದ ಬಳಿ ಚಿರತೆ, ಕರಡಿ ಪ್ರತ್ಯಕ್ಷ: ಪ್ರವಾಸಿಗರು ಆತಂಕ

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 13.  ಅಂಜನಾದ್ರಿ ಹಾಗೂ ಪಂಪಾಸರೋವರದ ಬಳಿ ಆಗಾಗ್ಗೆ ಚಿರತೆ ಹಾಗೂ ಕರಡಿ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಕರಡಿಗಳು ನುಗ್ಗಿವೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಭಕ್ತರು ಹಾಗೂ ಪ್ರವಾಸಿಗರ ಆಗ್ರಹಿಸುತ್ತಿದ್ದಾರೆ. ಉತ್ತರ ಭಾರತದಿಂದ ಬರುವ ಅನೇಕ ಪ್ರವಾಸಿಗರು ಇಲ್ಲಿ ರಾತ್ರಿ ವೇಳೆ ಸಮಯ ಕಳೆಯಲು ಬಯಸುತ್ತಾರೆ. ಆದರೆ, ಚಿರತೆ ಹಾಗೂ ಕರಡಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಭಯ ಹುಟ್ಟಿಸಿದೆ. ಭಯದಿಂದಾಗಿ ಪ್ರವಾಸಿಗರು ಹೊಸಪೇಟೆಗೆ ತೆರಳುತ್ತಿದ್ದಾರೆ  ಎಂದು ವರದಿ ತಿಳಿಸಿದೆ.

Also Read  ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

 

error: Content is protected !!
Scroll to Top