(ನ್ಯೂಸ್ ಕಡಬ) newskadaba.com ಬಿಹಾರ, ಸೆ. 13. ನರ್ಸ್ ಮೇಲೆ ವೈದ್ಯನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ನರ್ಸ್ ಆತನ ಮರ್ಮಾಂಗಕ್ಕೆ ಬ್ಲೇಡ್ ನಿಂದ ಕೊಯ್ದು ಓಡಿಹೋಗಿರುವ ಘಟನೆ ಬಿಹಾರದ ಸಮಸ್ಟಿಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಹೆದರುವ ಬದಲು ಧೈರ್ಯ ತೋರಿದ ನರ್ಸ್ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕೊಯ್ದು ಓಡಿ ಹೋಗುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೈದ್ಯ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಈತ ಬರೀ ವೈದ್ಯ ಮಾತ್ರವಲ್ಲದೇ ಆ ಖಾಸಗಿ ಆಸ್ಪತ್ರೆಯ ಆಡಳಿತ ನಿರ್ವಾಹಕನೂ ಆಗಿದ್ದ. ತನ್ನ ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ನರ್ಸ್ ಮೇಲೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಅತ್ಯಾಚಾರವೆಸಗಲು ಬಂದ ಡಾ ಸಂಜಯ್ ಕುಮಾರ್ ಮರ್ಮಾಂಗದ ಮೇಲೆ ನರ್ಸ್ ಬ್ಲೇಡ್‌ನಿಂದ ಕೊಯ್ದು, ಬಳಿಕ ಆ ಸ್ಥಳದಿಂದ ಓಡಿ ಹೋದ ಆಕೆ ಆಸ್ಪತ್ರೆಯ ಹೊರಗೆ ಬಂದು ಪೊಲೀಸರ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾಳೆ ಎನ್ನಲಾಗಿದೆ.