(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ಹೊಸ ಬೈಕ್ ಕೊಡಿಸಲು ತಾಯಿ ನಿರಾಕರಿಸಿದ್ದಕ್ಕೆ ಮನನೊಂದ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಅಯ್ಯಪ್ಪ ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದ ಕುಟುಂಬ ಬೆಂಗಳೂರಿನ ತಣಿಸಂದ್ರದಲ್ಲಿ ನೆಲೆಸಿತ್ತು. ಆರು ವರ್ಷಗಳ ಹಿಂದೆ ತಂದೆ ತೀರಿಕೊಂಡ ಬಳಿಕ ಯುವಕನ ತಾಯಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ಅಡಚಣೆಯಿಂದಾಗಿ, ಬೈಕ್ ಖರೀದಿಸಲು ಸಾಧ್ಯವಾಗಲಿಲ್ಲ. ಮತ್ತು ಸ್ವಲ್ಪ ಸಮಯ ಕಾಯುವಂತೆಯೂ ತಾಯಿ ಹೇಳಿದ್ದರು. ಗೆಳೆಯರೆಲ್ಲ ಕಾಲೇಜಿಗೆ ಬೈಕ್‌ನಲ್ಲಿ ಬರುತ್ತಿದ್ದರಿಂದ ತನಗೂ ಕೂಡಾ ಬೈಕ್ ಕೊಡಿಸುವಂತೆ ತಾಯಿಯನ್ನು ಒತ್ತಾಯಿಸುತ್ತಿದ್ದ ಎಂದೆನ್ನಲಾಗಿದೆ. ತಾಯಿ ಬೆಳಗ್ಗೆ ಎಂದಿನಂತೆ 6 ಗಂಟೆಗೆ ಕೆಲಸಕ್ಕೆ ತೆರಳಿದ್ದು, ಸಂಜೆ 4.30ಕ್ಕೆ ಮನೆಗೆ ಹಿಂತಿರುಗಿ ನೋಡಿದಾಗ ಮಗ ಚಾವಣಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.