(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಅಕ್ರಮವಾಗಿ ಡಾಂಬರು ದಾಸ್ತಾನು ಪ್ರಕರಣದಲ್ಲಿ ವಶಪಡಿಸಿದ್ದ ಲಾರಿಯನ್ನು (ಏಐ-10 ಎಂಆ-148 ನೇ ನಂಬ್ರದ ಟಾಟಾ ಎಸ್‍ಎಫ್‍ಸಿ 407) ಸೆಪ್ಟೆಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಸೊತ್ತನ್ನು ಪಡೆಯಲು ಇಚ್ಚಿಸುವವರು ಹರಾಜು ಸಮಯದ 1ಗಂಟೆ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಹರಾಜಿನಲ್ಲಿ ಭಾಗವಹಿಸಬೇಕು.
ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸುವ/ಮಾರ್ಪಡಿಸುವ ಸಂಪೂರ್ಣ ಅಧಿಕಾರವು ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಅವರದ್ದಾಗಿರುತ್ತದೆ. ಹರಾಜಿನಲ್ಲಿ ಭಾಗವಹಿಸುವವರು ಸೊತ್ತನ್ನು ಸುರತ್ಕಲ್ ಪೊಲೀಸ್ ಠಾಣಾ ಆವರಣದಲ್ಲಿ ವೀಕ್ಷಿಸಬಹುದು ಎಂದು ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.