(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.02. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಉದ್ಯೋಗಾಧಾರಿತ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಐಟಿಐ/ಡಿಪ್ಲ್ಲೊಮಾ/ಬಿ.ಇ (ಮೆಕ್ಯಾನಿಕಲ್ ವಿಭಾಗ) ನಿರುದ್ಯೋಗಿ ಯುವಕ/ಯುವತಿಯರು ಈ ತರಬೇತಿಗಳಿಗೆ ಅರ್ಹರಾಗಿರುತಾರೆ. ಈ ತರಬೇತಿಯನ್ನು ಮಂಗಳೂರಿನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅಯೋಜಿಸಲಾಗಿದ್ದು, ಈ ಯೋಜನೆಯಡಿ ಸಿಎನ್‍ಸಿ ಮೆಷಿನ್ ಪ್ರೋಗ್ರಾಮಿಂಗ್ (1 ತಿಂಗಳು) ಹಾಗೂ ಆಟೂಕ್ಯಾಡ್/ಪ್ರೊಇ/ಕ್ಯಾಟಿಯ/ಮಾಸ್ಟರ್ ಕ್ಯಾಮ್ (1 ತಿಂಗಳು) ನಲ್ಲಿ ಉಚಿತ ತರಬೇತಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ನಿಯಮಾನುಸಾರ ಸ್ಟೈಫೆಂಡ್ ನೀಡಲಾಗುವುದು. ಆಸಕ್ತರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ನಂ. 7ಇ, ಇಂಡಸ್ಟ್ರಿಯಲ್ ಎಸ್ಟೆಟ್ ಬೈಕಂಪಾಡಿ, ಮಂಗಳೂರು – 575011 ಫೋನ್: 0824-2408003, ಮೋಬೈಲ್: 9141629595 ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.